ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

Public TV
2 Min Read

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಪತ್ನಿಗೆ ಉಷಾಗೆ ಇಡಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಉಷಾ ಅವರು ನಾಳೆ ವಿಚಾರಣೆಗೆ ಹಾಜರಾಗಬೇಕೆಂದಿಲ್ಲ. ಹಾಗೆಯೇ ಗೌರಮ್ಮ ಅವರಿಗೆ ನೀಡಿದ್ದ ಸಮನ್ಸ್ ಕೂಡ ವಾಪಸ್ ಪಡೆದುಕೊಂಡಿದ್ದು, ಹೊಸದಾಗಿ ಸಮನ್ಸ್ ಕಳುಹಿಸುವುದಾಗಿ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟಿನಲ್ಲಿ ತಿಳಿಸಿದ್ದಾರೆ.

ಡಿಕೆಶಿ ಪತ್ನಿ ಹಾಗೂ ತಾಯಿ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಉಷಾ, ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ನ್ ವಾದ ಮಂಡಿಸಿ, ಬೇರೆ ಕೋರ್ಟ್ ಗಳ ತೀರ್ಪು ಉಲ್ಲೇಖ ಮಾಡುವ ಮೂಲಕ ಒಂದೇ ಪ್ರಕರಣವನ್ನು ಇಡಿ ತಿರುಚಿ ಆರೋಪ ಮಾಡುತ್ತಿದೆ. ಒಂದೇ ಪ್ರಕರಣದಲ್ಲಿ ಡಿಕೆಶಿ ಪತ್ನಿ ಉಷಾ ಮತ್ತು ಗೌರಮ್ಮ ಅವರಿಗೆ ನೊಟೀಸ್ ನೀಡಿದೆ. ಬೇರೆ ಪ್ರಕರಣವೊಂದರಲ್ಲಿ ಗೌರಮ್ಮ ಅವರಿಂದ ಡಿ.ಕೆ ಸುರೇಶ್ ಗೆ ಜಮೀನು ವರ್ಗ ಮಾಡಿರುವ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮಹಿಳೆಯರಿಗೆ ವಿನಾಯಿತಿ ಇದೆ ಎಂದು ವಾದಿಸಿದರು.

ಅಲ್ಲದೆ 15 ವರ್ಷಕ್ಕಿಂತ ಕೆಳಗಿರುವ ಮತ್ತು 85 ವರ್ಷದಕ್ಕಿಂತ ಮೇಲ್ಪಟ್ಟವರನ್ನು ಪೋಲೀಸ್ ಸ್ಟೇಷನ್ ಗೆ ವಿಚಾರಣೆಗೆ ಕರೆಯಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಗೌರಮ್ಮ ಮತ್ತು ಉಷಾ ಅವರಿಗೆ ನೊಟೀಸ್ ಕೊಡುವ ಅಗತ್ಯ ಇರಲಿಲ್ಲ ಎಂದು ಕೃಷ್ಣನ್ ವಾದಿಸಿದರು.

ಇದೇ ವೇಳೆ ಎಷ್ಟು ದಿನ ವಿಚಾರಣೆ ಮಾಡುತ್ತೀರಿ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಡಿ ಪರ ವಕೀಲರು, ಎರಡು ಪ್ರಕರಣಗಳಿವೆ ಹೀಗಾಗಿ ವಿಚಾರಣೆ ಮಾಡಬೇಕಾಗುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ತನಿಖೆ ಮಾಡಬೇಕು. ಮುಂದಿನ ವಾರದಲ್ಲಿ ವಿಚಾರಣೆ ನಡೆಸುತ್ತೇವೆ. ಸಮನ್ಸ್ ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.

ಮುಂದಿನ ವಾರ ಪ್ರಕರಣ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಮುಂದೂಡಿ, ನಾಳೆ ಉಷಾ ಶಿವಕುಮಾರ್ ಹಾಜರಾಗುವ ಅವಶ್ಯಕತೆ ಇಲ್ಲ. ಇಬ್ಬರಿಗೂ ತಾತ್ಕಾಲಿಕ ರಿಲೀಫ್ ನೀಡಲಾಗಿದೆ. ನಾಳೆ ವಿಚಾರಣೆ ಹಾಜರಾಗಬೇಕೆಂದಿಲ್ಲ. ಸಮನ್ಸ್ ವಾಪಸ್ ಪಡೆದು, ಹೊಸ ಸಮನ್ಸ್ ಜಾರಿ ಮಾಡುತ್ತೇವೆ. 7 ದಿನಗಳ ಬಳಿಕ ಸಮನ್ಸ್ ಬಳಿಕ ಹೊಸ ಸಮನ್ಸ್ ಜಾರಿ ಮಾಡುತ್ತೇವೆ ಎಂದು ಇಡಿ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ವಿಸ್ತ್ರತ ವಿಚಾರಣೆಯನ್ನು ಕೋರ್ಟ್ ನಡೆಸಲಿದೆ.

Share This Article
Leave a Comment

Leave a Reply

Your email address will not be published. Required fields are marked *