ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

Public TV
1 Min Read

ಗಾಂಧಿನಗರ: ಭಾರತ್ ಮಾತಾ ಕೀ ಜೈ… ಇದು ಪ್ರತಿಯೊಬ್ಬ ಭಾರತೀಯರು ಎದೆಯುಬ್ಬಿಸಿ ಮೊಳಗಿಸೋ ಘೋಷಣೆ. ಆದರೆ ಈ ಘೋಷಣೆಗೂ ಪೇಟೆಂಟ್ ಅಥವಾ ಕಾಪಿರೈಟ್ ಆಗ್ಬಿಟ್ರೇ ಏನಾಗ್ಬೇಡ.

ಗುಜರಾತ್‍ನ ಗಾಂಧಿನಗರದದಲ್ಲಿ ನಡೆದ ಸಮಾವೇಶದಲ್ಲಿ ಮಾತಾಡುವಾಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಯಲ್ ಅವರು, `ಭಾರತ್ ಮಾತಾಕೀ ಜೈ’ ಎನ್ನುವುದು ನಮ್ಮ ಘೋಷಣೆ. ಸ್ವಾತಂತ್ರ್ಯ ಹೋರಾಟದ ವೇಳೆ ಮೊದಲಿಗೆ ನಾವು ಈ ಘೋಷಣೆಯನ್ನು ಬಳಸಿದ್ದು ಅಂತ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಷ್ಟ್ರೀಯತೆಯನ್ನು ಬಿತ್ತಲು ಯತ್ನಿಸಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಕಾಂಗ್ರೆಸಿಗರ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಭಾರತ್ ಮಾತಾಕೀ ಜೈ ಎನ್ನುವುದು ಈಗ ನೆನಪಿಗೆ ಬಂತಾ ಎಂದು ಕೇಳಿದೆ. 2018ರ ರಾಜಸ್ಥಾನ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾರ್ಯಕರ್ತನೋರ್ವ ಈ ಘೋಷಣೆ ಕೂಗಿದ್ದಕ್ಕೆ ಅಲ್ಲಿದ್ದ ನಾಯಕರು ಅವರ ಬಾಯಿ ಮುಚ್ಚಿಸಿದ್ದರು. ಅಂದಹಾಗೆ, ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಅಂತ್ಯದಲ್ಲಿ ಎಲ್ಲಿ ಹೋದರೂ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ ಭಾಷಣವನ್ನು ಮುಗಿಸುತ್ತಾರೆ.

ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *