ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ

Public TV
1 Min Read

– ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವೆಂದರೆ ರಾಜವಂಶದ ಪಕ್ಷಗಳು

ನವದೆಹಲಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಇಂದು ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಪಕ್ಷದ ಸಮಸ್ಯೆಯೆಂದರೆ ಅದು ತನ್ನ ರಾಜವಂಶವನ್ನು ಮೀರಿ ಎಂದಿಗೂ ಯೋಚಿಸುವುದಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವೆಂದರೆ ರಾಜವಂಶದ ಪಕ್ಷಗಳು. ಕುಟುಂಬವು ಅತ್ಯುನ್ನತವಾದಾಗ ಅಲ್ಲಿ ಪ್ರತಿಭೆ ಬಲಿಯಾಗುತ್ತೆ ಎಂದರು. ಇದನ್ನೂ ಓದಿ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ

ಕಾಂಗ್ರೆಸ್ ಇಲ್ಲದಿದ್ದರೆ ಏನು ಎಂದು ಜನರು ಆಶ್ಚರ್ಯ ಪಡುತ್ತಾರೆ. ಅವರು ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂದು ಸಿಲುಕಿಸಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಬಯಸಿದ್ದರು. ಇದು ಮಹಾತ್ಮ ಗಾಂಧಿ ಅವರ ಆಶಯವಾಗಿತ್ತು. ಈ ಪಕ್ಷ ಉಳಿದರೆ ಏನಾಗುತ್ತದೆ ಎಂದು ಅವರಿಗೆ ತಿಳಿದಿತ್ತು. ಗಾಂಧಿ ಅವರ ಆಶಯಗಳನ್ನು ಅನುಸರಿಸಿದ್ದರೆ, ಭಾರತವು ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು ಎಂದು ವಿವರಿಸಿದರು.

ಗಾಂಧೀಜಿ ಅವರ ಆಶಯದಂತೆ ನಡೆದಿದ್ದರೆ, ಕಾಂಗ್ರೆಸ್ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಪ್ರಜಾಪ್ರಭುತ್ವವು ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು. ಭಾರತವು ಸ್ವದೇಶಿ ಮಾರ್ಗವನ್ನು ಹಿಡಿಯುತ್ತಿತ್ತು. ತುರ್ತುಪರಿಸ್ಥಿತಿಯ ಕಳಂಕ ಇರುತ್ತಿರಲಿಲ್ಲ. ದಶಕಗಳಿಂದ ಭ್ರಷ್ಟಾಚಾರ ಜೀವಂತವಾಗುತ್ತಿರಲಿಲ್ಲ. ಜಾತೀಯತೆ ಅಥವಾ ಪ್ರಾದೇಶಿಕತೆ ಇರಲಿಲ್ಲ. ಸಿಖ್ಖರನ್ನು ಕಗ್ಗೊಲೆ ಮಾಡುತ್ತಿರಲಿಲ್ಲ. ಮಹಿಳೆಯರನ್ನು ತಂದೂರಿನಲ್ಲಿ ಸುಟ್ಟು ಹಾಕುತ್ತಿರಲಿಲ್ಲ. ಸಾಮಾನ್ಯ ಜನರು ಮೂಲ ಸೌಕರ್ಯಗಳಿಗಾಗಿ ಇಷ್ಟು ದಿನ ಕಾಯಬೇಕಾಗಿರಲಿಲ್ಲ. ಇದೇ ರೀತಿ ನಾನು ಹೇಳುತ್ತಿದ್ರೆ ತುಂಬಾ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಮಿಳುನಾಡಿನ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ!

Share This Article
Leave a Comment

Leave a Reply

Your email address will not be published. Required fields are marked *