ಗೊಂದಲ ಮೂಡಿಸಿದ ಕೆಕೆ ಸಾವು : ಮುಖ, ತಲೆಗೆ ಗಾಯ

Public TV
1 Min Read

ಬಾಲಿವುಡ್ ನ ಖ್ಯಾತ ಗಾಯ ಕೆಕೆ ಅವರ ಸಾವು ಹಲವು ಗೊಂದಲಗಳಿಗೆ ಕಾರಣವಾಗಿದೆ. ನಿನ್ನೆ ರಾತ್ರಿ ಅವರು ಕೋಲ್ಕತ್ತದಲ್ಲಿ ಲೈವ್ ಶೋ ನಡೆಸುತ್ತಿದ್ದರು. ಕಾರ್ಯಕ್ರಮ ಶುರುವಾಗಿ ಒಂದು ಗಂಟೆ ಕೂಡ ಕಳೆದಿರಲಿಲ್ಲ. ಆಗಲೇ ಅವರಿಗೆ ದೇಹ ಬಳಲಿದಂತೆ ಆಗಿತ್ತು. ಅಷ್ಟರ ಮಧ್ಯಯೂ ಬರೋಬ್ಬರಿ ಒಂದು ಗಂಟೆಗಳ ಕಾಲ ನಿರಂತರ ಹಾಡಿದ ಕೆಕೆ, ನಂತರ ತೀರಾ ಬಳಲಿಕೆ ಆಗಿದ್ದರಿಂದ ಹೊಟೇಲ್ ಗೆ ತೆರೆಳಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

ಕೆಕೆಯನ್ನು ಕಾರ್ಯಕ್ರಮದಲ್ಲಿ ಹತ್ತಿರದಿಂದ ಕಂಡವರು ಹೇಳಿದಂತೆ, ಅವರು ಕಾರ್ಯಕ್ರಮಕ್ಕೆ ಆಗಮಿಸಿದಾಗ ತುಂಬಾ ಚೆನ್ನಾಗಿಯೇ ಇದ್ದರು. ಯಾವುದೇ ಆಯಾಸದ ಭಾವ ಅವರಲಿಲ್ಲ ಇರಲಿಲ್ಲ. ಕುಣಿದು ಕುಪ್ಪಳಿಸಿದರು. ಜನರನ್ನೂ ಕುಣಿಯುವಂತೆ ಹುರುದುಂಬಿಸಿದರು. ಸ್ವಲ್ಪ ಸಮಯ ಕಳೆದಂತೆ, ಅವರಲ್ಲಿ ಒದ್ದಾಟ ಕಾಣುತ್ತಿತ್ತು. ಸಡನ್ನಾಗಿ ಅವರು ವೇದಿಕೆಯಿಂದ ಹೊರ ನಡೆದರು ಎನ್ನುತ್ತಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

ಅಂಗರಕ್ಷಕರ ಸುಪರ್ದಿಯಲ್ಲೇ ಕೆಕೆ ಅವರನ್ನು ಹೋಟೆಲ್ ಗೆ ಕಳುಹಿಸಿ ಕೊಡಲಾಗಿದೆ. ಸ್ವಲ್ಪ ಹೊತ್ತು ವಿಶ್ರಾಂತಿ ತಗೆದುಕೊಂಡು ಮತ್ತೆ ಬರುವೆ ಎಂದೂ ಹೇಳಿದ್ದರಂತೆ ಕೆಕೆ. ಆದರೆ, ವಿಧಿಯಾಟ ಬೇರೆಯೇ ಆಗಿದೆ. ಹೋಟೆಲ್ ಗೆ ಹೋದ ನಂತರ ಇನ್ನೂ ಬಳಲಿದ್ದಾರೆ ಕೆಕೆ. ಅವರು ಹೋಟೆಲ್ ನಲ್ಲಿ ಕುಸಿದರು ಎನ್ನಲಾಗುತ್ತಿದೆ. ಹಾಗಾಗಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

ಕೆಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮುಖ ಮತ್ತು ತೆಲೆಗೆ ಪೆಟ್ಟಾಗಿದ್ದು ಕಂಡು ಬಂದಿದೆ. ಅದಕ್ಕೆ ಕಾರಣ, ಕೆಕೆ ಅವರು ಹೋಟೆಲ್ ನಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಖ ಮತ್ತು ತೆಲೆಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ತನಿಖೆ ಕೂಡ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *