ಬೆಂಗಳೂರು: ಕಲಬುರಗಿಯಲ್ಲಿ (Kalaburagi) ಗಣೇಶ ಹಬ್ಬ (Ganesh Festival) ಆಚರಣೆಗೆ ವಿಧಿಸಿರುವ ಷರತ್ತುಗಳ ವಿರುದ್ಧ ವಿಧಾನ ಪರಿಷತ್ (Legislative Council) ಕಲಾಪದಲ್ಲಿ ಬಿಜೆಪಿ (BJP) ಸದಸ್ಯರು ಪ್ರತಿಭಟನೆ ನಡೆಸಿದರು.
ಬಿಜೆಪಿ ಸದಸ್ಯ ಶಶೀಲ್ ನಮೋಶಿ ವಿಷಯ ಪ್ರಸ್ತಾಪ ಮಾಡಿ, ಗಣೇಶ ಹಬ್ಬಕ್ಕೆ ನಮ್ಮ ಜಿಲ್ಲೆಯಲ್ಲಿ ಡಿಜಿ, ಸೌಂಡ್ ಹಾಕಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಬೆಂಗಳೂರಿನಲ್ಲಿ ಇಲ್ಲದ ನಿಯಮ ನಮಗೆ ಯಾಕೆ? ನಮ್ಮ ಜಿಲ್ಲೆಯಲ್ಲಿ ಗಣೇಶ ಹಬ್ಬ ವಿಜೃಂಭಣೆಯಿಂದ ಮಾಡಲು ಅವಕಾಶ ಕೊಡಿ. ಸ್ವಾತಂತ್ರ‍್ಯಕ್ಕಾಗಿ ತಿಲಕರು ಹಬ್ಬ ಶುರು ಮಾಡಿದರು. ಆಗ ಬ್ರಿಟಿಷರೇ ಅದಕ್ಕೆ ಅವಕಾಶ ಕೊಟ್ಟಿದ್ದರು. ಈಗ ಯಾಕೆ ಕಂಡೀಷನ್ ಹಾಕ್ತೀರಾ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ನಮಸ್ತೇ ಸದಾ ವತ್ಸಲೇ ಎಂದು ಆರ್‌ಎಸ್‌ಎಸ್ ಗೀತೆ ಹಾಡಿದ ಡಿಕೆಶಿ – ಕಾಲೆಳೆದ ಬಿಜೆಪಿ ನಾಯಕರು
ಪ್ರದೀಪ್ ಶೆಟ್ಟರ್ ಮಾತನಾಡಿ, ಹಿಂದೂ ಹಬ್ಬಕ್ಕೆ ಯಾಕೆ ನಿಯಮ ಹಾಕ್ತೀರಾ? ಬೇರೆ ಅವರು ರಾತ್ರಿ ಎಲ್ಲಾ ಸೌಂಡ್ ಹಾಕೋಕೆ ಅವಕಾಶ ಕೊಡ್ತೀರಾ ಎಂದು ಆಗ್ರಹಿಸಿದರು. ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಗಣೇಶ ಹಬ್ಬಕ್ಕೆ ಇಡೀ ರಾಜ್ಯಕ್ಕೆ ಒಂದು ನಿಯಮ ಆಗಿರಬೇಕು. ಕಲಬುರಗಿ ರಿಪಬ್ಲಿಕ್ ಕಲಬುರಗಿ ಆಗಿದೆ. ಅಲ್ಲಿ ಬೇರೆ ಬೇರೆ ಕಾನೂನು ಇದೆ. ನಮ್ಮ ಹಬ್ಬ ಮಾಡೋಕೆ ನಾವು ಪರ್ಮಿಷನ್ ತಗೋಬೇಕಾ? ರಾಜ್ಯಕ್ಕೆ ಒಂದೇ ಕಾನೂನು ಮಾಡಿ. ಜಿಲ್ಲೆಗೆ ಒಂದು ನಿಯಮ ಬೇಡ ಎಂದು ಸರ್ಕಾರವನ್ನ ಒತ್ತಾಯಿಸಿದರು.
ಇದಕ್ಕೆ ಸಭಾಪತಿ ನಾಯಕ ಬೋಸರಾಜು ಉತ್ತರ ಕೊಟ್ಟು, ಗಣೇಶ ಹಬ್ಬಕ್ಕೆ ಅನುಮತಿ ಕೊಡುವ, ನಿಯಮ ಮಾಡುವುದನ್ನ ಡಿಸಿಗಳಿಗೆ ಅಧಿಕಾರ ಕೊಡಲಾಗಿದೆ. ಸರ್ಕಾರದಿಂದ ಇಂತಹ ನಿಯಮ ಹಾಕಿಲ್ಲ. ಡಿಸಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಜಿಲ್ಲೆಗೆ ಅನುಗುಣವಾಗಿ ಡಿಸಿಗಳು ನಿಯಮ ಹಾಕ್ತಾರೆ. ಜಿಲ್ಲೆಯ ನಿಯಮದ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದರು.
ಇದಕ್ಕೆ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಣೆಗೆ ಅವಕಾಶ ಕೊಡಬೇಕು ಅಂತ ಒತ್ತಾಯಿಸಿದರು. ಕಲಬುರಗಿಯಲ್ಲಿ ಗಣೇಶ ಹಬ್ಬಕ್ಕೆ ಪ್ರತ್ಯೇಕ ನಿಯಮ ಮಾಡೋದು ಸರಿಯಲ್ಲ. ಸರ್ಕಾರದ ನಡೆಗೆ ಬಿಜೆಪಿ ಸದಸ್ಯರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹಿಂದೂ ವಿರೋಧ ಸರ್ಕಾರ ಎಂದು ಘೋಷಣೆ ಕೂಗಿದರು. ಗದ್ದಲ ಗಲಾಟೆ ಹೆಚ್ಚಾದ ಹಿನ್ನೆಲೆ ಕಲಾಪವನ್ನು ಸಭಾಪತಿಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.ಇದನ್ನೂ ಓದಿ: 9ನೇ ಕ್ಲಾಸ್‌ನಲ್ಲಿದ್ದಾಗಲೇ ಸುಜಾತ ಬಸುರಿಯಾಗಿದ್ದಳು, ತಂದೆ ಅಬಾರ್ಷನ್ ಮಾಡಿಸಿದ್ದರು: ಸಹೋದರ ಸ್ಫೋಟಕ ಹೇಳಿಕೆ