ಸಿಎಂ-ಡಿಸಿಎಂ ನಡ್ವೆ ಕಾಂಪ್ರಮೈಸ್ ಥಿಯರಿ – ʻಕೈʼ ಹೈಕಮಾಂಡ್ ಧರ್ಮಸಂಕಟದಿಂದ ಪಾರಾಗುತ್ತಾ..?

2 Min Read

– ಅವಶ್ಯಕತೆ ಇದ್ದಾಗೆಲ್ಲ ಡೆಲ್ಲಿಗೆ ಕರೆಸ್ತೀವಿ ಎಂದ ಖರ್ಗೆ

ಬೆಂಗಳೂರು: ಸಿಎಂ, ಡಿಸಿಎಂ ನಡುವೆ ಕಾಂಪ್ರಮೈಸ್ ಥಿಯರಿ ಸಿದ್ಧವಾಗಿದ್ಯಾ? ಎಂಬ ಬಿಸಿಬಿಸಿ ಚರ್ಚೆ ಜೋರಾಗಿದೆ. 3 ತಿಂಗಳು ಕದನ ವಿರಾಮ ವಿಸ್ತರಣೆ ಜೊತೆಗೆ ಸಿದ್ದರಾಮಯ್ಯ (Siddaramaiah) ದಾಖಲೆ ಬಜೆಟ್ ಮಂಡನೆಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಸಿಎಂ, ಡಿಸಿಎಂ ಕಾಂಗ್ರೆಸ್ ಹೈಕಮಾಂಡ್‌ಗೆ (Congress Highcommand) ಸ್ಮೂತ್ ಆಪ್ಶನ್ ಕೊಡ್ತಾರಾ? ಎಂಬ ಕುತೂಹಲ ಮನೆ ಮಾಡಿದೆ.

ಇನ್ನೂ ನಮ್ಮ ನಡುವೆ ಯಾವುದೇ ಕಾಳಗವೇ ಇಲ್ಲ. ಕಾಳಗ ಎಲ್ಲಿದೆ..? ಎಂದು ನಿನ್ನೆಯಷ್ಟೇ ಪವರ್ ಶೇರ್ ವಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಲ್ ರಿಯಾಕ್ಷನ್ ಕೊಟ್ಟಿದ್ರೆ, ಹೈಕಮಾಂಡ್ ಮೇಲೆ ವಿಶ್ವಾಸ ಇದೆ, ನನಗೆ ಅರ್ಜೆಂಟ್ ಇಲ್ಲ ಅಂತ ಡಿಕೆಶಿ ಅಸ್ತ್ರ ಪ್ರಯೋಗಿಸಿದ್ದಾರೆ. ಅಷ್ಟೇ ಅಲ್ಲ ಹಲವು ದಿನಗಳಿಂದ ಸಿದ್ದರಾಮಯ್ಯ ಜೊತೆಯಲ್ಲೇ ಡಿಕೆಶಿ (DK Shivakumar) ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷ. ಹಾಗಾಗಿ ಪವರ್ ಶೇರ್ ಬಗ್ಗೆ ಏನೇ ಕೇಳಿದ್ರೂ ಇಬ್ಬರಿಂದಲೂ ಕೂಲ್ ಪಿರಿಯೆಡ್ ಮಾತುಗಳು ಹೊರಬೀಳುತ್ತಿರುವುದು ಸಾಕಷ್ಟು ಲೆಕ್ಕಾಚಾರ ಹುಟ್ಟು ಹಾಕಿವೆ. ಇದನ್ನೂ ಓದಿ: ಸಿಎಂ ಎದುರೇ ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ – ಯತ್ನಾಳ್

ಒಟ್ನಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆ ಇದ್ದು, ಸಿಎಂ, ಡಿಸಿಎಂ ಕಾಂಪ್ರಮೈಸ್ ಥಿಯರಿಯಿಂದ ಕಾಂಗ್ರೆಸ್ ಹೈಕಮಾಂಡ್ ಧರ್ಮಸಂಕಟದಿಂದ ಪಾರಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಸಂಕ್ರಾಂತಿ ಮಾರನೇ ದಿನವೇ ಡಿಕೆಶಿ ಡೆಲ್ಲಿ ಟೂರ್ – ರಾಹುಲ್ ಭೇಟಿಗೆ ಸಮಯ ಕೇಳಿದ ಡಿಕೆಶಿ

ಖರ್ಗೆ-ಡಿಕೆಶಿ 1 ಗಂಟೆ ಬ್ರೇಕ್ ಫಾಸ್ಟ್ ಮೀಟಿಂಗ್
ಸಿಎಂ ಬದಲಾವಣೆ ವಿಷಯ ಚರ್ಚೆ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನ ಡಿಕೆಶಿ ಭೇಟಿಯಾಗಿ ಕುತೂಹಲ ಹುಟ್ಟು ಹಾಕಿದ್ದಾರೆ. 1 ಗಂಟೆಗೂ ಹೆಚ್ಚು ಸಮಯ ಸದಾಶಿವನಗರದ ಖರ್ಗೆ ಮನೆಯಲ್ಲಿ ಡಿಸಿಎಂ ಇದ್ದು ಮಾತುಕತೆ ‌ನಡೆಸಿದ್ರು. ಬ್ರೇಕ್ ಫಾಸ್ಟ್ ‌ಮೀಟಿಂಗ್ ನಡೆಸಿದ ಉಭಯ ನಾಯಕರು ಮಾತುಕತೆ ನಡೆಸಿದ್ರು. ಈ ವೇಳೆ ದೆಹಲಿ ಭೇಟಿ ಬಗ್ಗೆ ಡಿಕೆಶಿ ಚರ್ಚೆ ನಡೆಸಿದ್ರು ಎನ್ನಲಾಗಿದೆ.

ಇನ್ನು ಸಿಎಂ, ಡಿಸಿಎಂ ಇಬ್ಬರನ್ನ ದೆಹಲಿಗೆ ಕರೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾವಾಗ ಯಾವಾಗ ಬೇಕು ಆಗ ಕರೆಸುತ್ತೇವೆ. ಹೈಕಮಾಂಡ್ ಗೆ ಕರೆಸುವ ಅವಶ್ಯಕತೆ ಇದ್ದಾಗ ಕರೆಸುತ್ತೇವೆ ಅಂತೇಳಿದ್ರು. ಆದರೆ ಸಂಕ್ರಾಂತಿ ಬಳಿಕ ಏನಾದ್ರೂ ಆಗುತ್ತಾ..? ಎಂಬುದಕ್ಕೆ ಏನೂ ಮಾತನಾಡದೇ ಮಲ್ಲಿಕಾರ್ಜುನ ಖರ್ಗೆ ತೆರಳಿದ್ರು. ಇದನ್ನೂ ಓದಿ: PUBLiC TV Impact | ನಮ್ಮಿಂದ ತಪ್ಪಾಗಿದೆ ಕ್ಷಮಿಸಿ – ಕನ್ನಡಿಗರ ಕ್ಷಮೆಯಾಚಿಸಿದ ಖಾಸಗಿ ಕಂಪನಿ

Share This Article