ʻಪಬ್ಲಿಕ್‌ ಟಿವಿʼ ಸಿಬ್ಬಂದಿಗೆ ಸಮಗ್ರ ಆರೋಗ್ಯ ತಪಾಸಣೆ

Public TV
1 Min Read

– 2 ದಿನಗಳ ಕಾಲ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು: ʻಪಬ್ಲಿಕ್‌ ಟಿವಿʼ (Public TV) ವತಿಯಿಂದ ಮಲ್ಲೇಶ್ವರಂನ ಮಣಿಪಾಲ್‌ ಆಸ್ಪತ್ರೆ (Manipal Hospital) ಸಹಯೋಗದಲ್ಲಿ ಸಿಬ್ಬಂದಿ‌ ವರ್ಗದವರಿಗೆ ಎರಡು ದಿನಗಳ ಕಾಲ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ತಪಾಸಣಾ ಶಿಬಿರಕ್ಕೆ (Health Checkup Camp) ಶುಕ್ರವಾರ ಚಾಲನೆ ನೀಡಲಾಯಿತು. ಪ್ರಾಥಮಿಕ, ರಕ್ತ ಪರೀಕ್ಷೆ ಹಾಗೂ ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಯಿತು. ಸಂಸ್ಥೆಯ ಎಲ್ಲ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಯಿತು. ಇದನ್ನೂ ಓದಿ: 2ನೇ ಆಷಾಢ ಶುಕ್ರವಾರ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ

ಎರಡು ದಿನಗಳ ಕಾಲ ನಡೆಯುತ್ತಿರುವ ಈ ಆರೋಗ್ಯ ತಪಾಸಣಾ ಶಿಬಿರವು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೂ ನಡೆಯಲಿದೆ. ರಕ್ತದೊತ್ತಡ, ರಕ್ತ ಪರೀಕ್ಷೆ (Blood Test), ಎತ್ತರ, ತೂಕ, ಇಸಿಜಿ (ECG) ಸೇರಿ ವಿವಿಧ ರೀತಿಯ ತಪಾಸಣೆ ಮಾಡಲಾಯಿತು. ಇದನ್ನೂ ಓದಿ: ಚಿಪ್ಸ್ ಖರೀದಿಸಲು ಅಂಗಡಿಗೆ ತೆರಳಿದ್ದ 7ರ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

‘ಪಬ್ಲಿಕ್‌ ಟಿವಿ’ಯ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣೆಗೆ ಒಳಗಾದರು. ಮಣಿಪಾಲ್‌ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದರು. ಶನಿವಾರವೂ ಸಹ ತಪಾಸಣಾ ಶಿಬಿರ ಇರಲಿದೆ. ಇದನ್ನೂ ಓದಿ: ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

Share This Article