ನಯನತಾರಾ-ವಿಘ್ನೇಶ್ ಶಿವನ್ ವಿರುದ್ಧ ದಾಖಲಾಯ್ತು ದೂರು

Public TV
1 Min Read

ಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ವಿರುದ್ಧ ಅವರ ಸಂಬಂಧಿಕರೇ ದೂರು ನೀಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಘ್ನೇಶ್ ಶಿವನ್ ಮೂಲತಃ ತಮಿಳುನಾಡು ತಿರು (Trichy)ಚ್ಚಿ ಜಿಲ್ಲೆ, ಲಾಕ್ ಕುಡಿ ಹಳ್ಳಿಗೆ ಸೇರಿದವರು. ಅಲ್ಲಿಯೇ ಅವರ ತಂದೆ ಮತ್ತು ಪೂರ್ವಜರು ಬಾಳಿ ಬದುಕಿದ್ದಾರೆ. ವಿಘ್ನೇಶ್ ಶಿವನ್ ತಂದೆ ಶಿವಕೋಲುಂದು ಅವರಿಗೆ ಒಟ್ಟು ಒಂಬತ್ತು ಜನ ಸಹೋದರರು. ಆ ಸಹೋದರರಿಗೆ ಗೊತ್ತಾಗದಂತೆ ಪೂರ್ವಜರ ಜಮೀನು ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಸಹೋದರರದ್ದು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ಶಿವಕೋಲುಂದು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರು ಬದುಕಿದ್ದಾಗಲೇ ಸಹೋದರರಿಗೆ ಗೊತ್ತಾಗದಂತೆ ಆಸ್ತಿ ಮಾರಿದ್ದಾರೆ ಎನ್ನುವುದು ಸಂಬಂಧಿಗಳ ಆರೋಪ. ತಿರುಚ್ಚಿ ಡಿ.ಎಸ್.ಪಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ಆ ದೂರಿನಲ್ಲಿ ಸ್ಟಾರ್ ಜೋಡಿಯ ಹೆಸರು ಸೇರ್ಪಡೆಯಾಗಿದೆ. ಶಿವಕೋಲುಂದು ಸಹೋದರ ಮಾಣಿಕ್ಯಂ ಎನ್ನುವವರು ದೂರು ನೀಡಿದ್ದಾರೆ.

 

ಮಾಣಿಕ್ಯಂ  (Manikyam)ಕೊಟ್ಟ ದೂರಿನಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ಮಗಳು ಐಶ್ವರ್ಯ ಹಾಗೂ ವಿಘ್ನೇಶ್ ಮತ್ತು ನಯನತಾರಾ ಹೆಸರು ಕೂಡ ಇದೆ. ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಡಿಜಿಪಿ ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದ್ದಾರೆ. ಹೀಗಾಗಿ ಸ್ಟಾರ್ ದಂಪತಿಗೆ ಮತ್ತೊಂದು ತಲೆ ನೋವು ಎದುರಾಗಿದೆ.

Share This Article