ರಾಮನಗರ: ಚುಂಚಿಫಾಲ್ಸ್‌ಗೆ (Chunchi Falls) ಬರುವ ಪ್ರವಾಸಿಗರಿಂದ (Tourists) ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಹಣ ವಸೂಲಿ ಮಾಡಿ ಕಿರುಕುಳ ನೀಡುವ ಆರೋಪ ಕೇಳಿಬಂದಿದ್ದು, ಪ್ರವಾಸಿಗರ ಬಳಿ ಹಣ ವಸೂಲಿ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನಕಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿರುವ ಚುಂಚಿಫಾಲ್ಸ್‌ನಲ್ಲಿ ಇಬ್ಬರಿಗೆ 100 ರೂ. ನಂತೆ ಖಾಸಗಿ ವ್ಯಕ್ತಿಗಳು ಹಣ ಪಡೆಯುತ್ತಿದ್ದು, ಇದನ್ನ ಪ್ರಶ್ನಿಸಿದ ಪ್ರವಾಸಿಗರ ಜೊತೆ ವಾಗ್ವಾದ ನಡೆಸಿದ್ದಾರೆ. ಹಣ ನೀಡದೇ ಯಾವುದೇ ಕಾರಣಕ್ಕೂ ಫಾಲ್ಸ್ ಬಳಿ ಬಿಡಲ್ಲ ಅಂತ ಪ್ರವಾಸಿಗರನ್ನ ಅಡ್ಡಗಟ್ಟಿದ್ದಾರೆ. ಈ ಬಗ್ಗೆ ಪ್ರವಾಸಿಗರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಹಾಸನ | ಶಾಲೆಯಲ್ಲಿ ಮಕ್ಕಳ ನಡುವೆ ಗಲಾಟೆ – ತಂದೆಯ ಕೊಲೆಯಲ್ಲಿ ಅಂತ್ಯ
ವೀಡಿಯೋ ಗಮನಿಸಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅಕ್ರಮ ಹಣ ವಸೂಲಿ ಮಾಡ್ತಿರೋ ಖಾಸಗಿ ವ್ಯಕ್ತಿಗಳ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೃದಯ ಶಸ್ತ್ರಚಿಕಿತ್ಸಕನಿಗೇ ಹೃದಯ ಸ್ತಂಭನ; ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದಾಗ ಕುಸಿದುಬಿದ್ದು ಸಾವು