Commonwealth Games 2022 – ಗಮನಸೆಳೆದ ಹದಿನಾಲ್ಕರ ಬಾಲೆ ಅನಾಹತ್ ಸಿಂಗ್

Public TV
2 Min Read

ಲಂಡನ್: ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಹದಿನಾಲ್ಕರ ಹರೆಯದ ಸ್ಕ್ವಾಷ್ ಕ್ರೀಡಾಪಟು ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 32ನೇ ಸುತ್ತಿಗೆ ತಲುಪಿದ್ದಾರೆ. ಈ ಮೂಲಕ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ ಪ್ರೇಕ್ಷಕರ ಗಮನಸೆಳೆದಿದ್ದಾರೆ.

ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ನ ಜಾಡಾ ರಾಸ್‍ರನ್ನು 11-5, 11-2, 11-0 ಸೆಟ್‍ಗಳಿಂದ ಸೋಲಿಸಿ 32ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್

14 ವರ್ಷ ವಯಸ್ಸಿನ ಅನಾಹತ್ ಸಿಂಗ್ ಈಗ 9ನೇ ತರಗತಿಯಲ್ಲಿ ಓದುತ್ತಿದ್ದು ದೆಹಲಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅನಾಹತ್ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಉತ್ತಮವಾಗಿ ಆಟವಾಡುವ ಮೂಲಕ ಬರ್ಮಿಂಗ್ ಹ್ಯಾಮ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಇದನ್ನೂ ಓದಿ: ರೋಹಿತ್‌, ಡಿಕೆ ಬ್ಯಾಟಿಂಗ್‌ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ತತ್ತರ – ಭಾರತಕ್ಕೆ 68 ರನ್‌ಗಳ ಭರ್ಜರಿ ಜಯ

https://twitter.com/arindam03405129/status/1553077863527563264

ಪ್ರತಿಭಾವಂತೆಯಾಗಿರುವ ಅನಾಹತ್ ಕಿರಿಯ ವಯಸ್ಸಿನಲ್ಲೇ ಕ್ರೀಡಾ ವಲಯ ಅಚ್ಚರಿಯ ಕಣ್ಣುಗಳಿಂದ ನೋಡುವಂಥ ಪ್ರದರ್ಶನ ನೀಡಿದ್ದಾರೆ. ಆರು ವರ್ಷಗಳಲ್ಲಿ 46 ರಾಷ್ಟ್ರೀಯ ಸರ್ಕ್ಯೂಟ್ ಪ್ರಶಸ್ತಿಗಳು, ಎರಡು ರಾಷ್ಟ್ರೀಯ ಚಾಂಪಿಯನ್‍ಶಿಪ್‍ಗಳು ಮತ್ತು ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಓಪನ್ (2019) ಮತ್ತು ಯುಎಸ್ ಜೂನಿಯರ್ ಸ್ಕ್ವಾಷ್ ಓಪನ್ (2021) ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ. ಅನಾಹತ್ ಅವರು ಆಗಸ್ಟ್ 9 ರಂದು ಫ್ರಾನ್ಸ್‌ನ ನ್ಯಾನ್ಸಿಯಲ್ಲಿ 2022ರ ವಿಶ್ವ ಜೂನಿಯರ್ಸ್ ಸ್ಕ್ವಾಷ್ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದಿದ್ದಾರೆ.

22ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ದಿನ ಭಾರತ ಯಾವುದೇ ಪದಕ ಬೇಟೆ ಆಡಿಲ್ಲ. ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಆದರೆ, ಇದೇ ಮೊದಲ ಬಾರಿಗೆ ಕ್ರೀಡಾಕೂಟ ಸೇರಿರುವ ಮಹಿಳಾ ಟಿ20-ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಆರಂಭವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ 3 ವಿಕೆಟ್‍ಗಳ ಸೋಲುಂಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *