ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ – ಇಂದು ಯಾವ ಸ್ಪರ್ಧೆಗಳು ಎಷ್ಟು ಗಂಟೆಗೆ ಆರಂಭ?

Public TV
4 Min Read

ಲಂಡನ್: ಬರ್ಮಿಂಗ್ ಹ್ಯಾಮ್‍ನಲ್ಲಿ 22ನೇ ಆವೃತ್ತಿಯ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಇಂದಿನಿಂದ ಕ್ರೀಡಾ ಸ್ಫರ್ಧೆಗಳು ನಡೆಯಲಿದೆ.

ನಿನ್ನೆ ಬರ್ಮಿಂಗ್ ಹ್ಯಾಂನಲ್ಲಿ ಕಾಮನ್‍ವೆಲ್ತ್ ಗೇಮ್ಸ್ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜ  ಹಿಡಿದು ಭಾರತ ಕ್ರೀಡಾಪಟುಗಳ ತಂಡವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮತ್ತು ಮನ್‍ಪ್ರೀತ್ ಸಿಂಗ್ ಮುನ್ನಡೆಸಿದರು. ಇದನ್ನೂ ಓದಿ: ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

ಇಂಗ್ಲೆಂಡ್‍ನ ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ 72 ಕಾಮನ್‍ವೆಲ್ತ್ ರಾಷ್ಟ್ರಗಳ 5,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ 214 ಸ್ಪರ್ಧಿಗಳು ವಿವಿಧ ಸ್ಫರ್ದೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕ್ರೀಡಾಕೂಟಗಳಲ್ಲಿ 134 ಪುರುಷರ ಪದಕ ಸ್ಪರ್ಧೆಗಳು ಮತ್ತು 136 ಮಹಿಳೆಯರ ಪದಕ ಸ್ಪರ್ಧೆಗಳು ನಡೆಯಲಿದೆ.

ಈ ಹಿಂದೆ ನೀರಜ್ ಚೋಪ್ರಾ ಧ್ವಜಧಾರಿಯಾಗಲಿದ್ದಾರೆ ಎನ್ನಲಾಗಿತ್ತು. ಗಾಯದ ಕಾರಣ ಕಾಮನ್‍ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಕಾರಣ ಪಿ.ವಿ ಸಿಂಧು ಭಾರತ ತಂಡವನ್ನು ಮುನ್ನಡೆಸಿದರು. ಈ ಮೂಲಕ ಪಿ.ವಿ ಸಿಂಧು ಎರಡನೇ ಬಾರಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಧ್ವಜಧಾರಿಯಾಗಿ ಹೆಜ್ಜೆ ಹಾಕಿದರು. 2018ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಪಿ.ವಿ ಸಿಂಧು ಧ್ವಜಧಾರಿಯಾಗಿದ್ದರು. ಬಳಿಕ ಈ ಬಾರಿ ಕೂಡ ಸಿಂಧುಗೆ ಧ್ವಜಧಾರಿಯಾಗಿ ಹೆಜ್ಜೆ ಹಾಕುವ ಅವಕಾಶ ದೊರೆಯಿತು. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

2018ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಭಾರತ ಒಟ್ಟು 66 ಪದಕ ಗೆದ್ದಿತ್ತು. ಈ ಮೂಲಕ ಪದಕ ಪಟ್ಟಿಯಲ್ಲಿ ಟಾಪ್-5 ರಲ್ಲಿ ಸ್ಥಾನ ಸಂಪಾದಿಸಿತ್ತು. ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್-5ರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದು, ಹಲವು ಕ್ರೀಡಾಪಟುಗಳ ಮೇಲೆ ಪದಕ ನಿರೀಕ್ಷೆ ಇದೆ.

ಇಂದು ಸೈಕಿಂಗ್, ಜಿಮ್ನಾಸ್ಟಿಕ್ ಸೇರಿದಂತೆ ಹಲವು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್ ಪಂದ್ಯ ಸೇರ್ಪಡೆಗೊಂಡಿದ್ದು, ಇಂದು ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಮಹಿಳಾ ಹಾಕಿಯಲ್ಲಿ ಘಾನಾ ತಂಡವನ್ನು ಭಾರತ ಎದುರಿಸಲಿದೆ.

ಯಾವೆಲ್ಲ ಸ್ಫರ್ಧೆಗಳು ಎಷ್ಟೊತ್ತಿಗೆ:
ಮಧ್ಯಾಹ್ನ 1:00 ಗಂಟೆ: ಲಾನ್ ಬೌಲ್ – ತಾನಿಯಾ ಚೌಧರಿ ಮಹಿಳೆಯರ ವಿಭಾಗ ಮೊದಲ ಸುತ್ತು
ಮಧ್ಯಾಹ್ನ 1:00 ಗಂಟೆ: ಲಾನ್ ಬೌಲ್ – ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ ಭಾರತ-ನ್ಯೂಜಿಲೆಂಡ್
ಮಧ್ಯಾಹ್ನ 2:00 ಗಂಟೆ: ಟೇಬಲ್ ಟೆನಿಸ್ – ಭಾರತ – ದಕ್ಷಿಣ ಆಫ್ರಿಕಾ
ಮಧ್ಯಾಹ್ನ 3:11 ಗಂಟೆ: ಈಜು – 400 ಮೀ ಪುರುಷರ ಫ್ರೀಸ್ಟೈಲ್ ಹೀಟ್‍ನಲ್ಲಿ ಕುಶಾಗ್ರಾ ರಾವತ್
ಮಧ್ಯಾಹ್ನ 3:25 ಗಂಟೆ: ಸೈಕ್ಲಿಂಗ್ – ಪುರುಷರ 400 ಮೀ ಟೀಮ್ ಪರ್ಸ್ಯೂಟ್ ಅರ್ಹತೆ
ಮಧ್ಯಾಹ್ನ 3:30 ಗಂಟೆ: ಕ್ರಿಕೆಟ್ – ಭಾರತ-ಆಸ್ಟ್ರೇಲಿಯಾ
ಮಧ್ಯಾಹ್ನ 3:31 ಗಂಟೆ: ಟ್ರಯಥ್ಲಾನ್ – ಪುರುಷರ ವೈಯಕ್ತಿಕ ಸ್ಪ್ರಿಂಟ್ ಆದರ್ಶ್ ಮತ್ತು ವಿಶ್ವನಾಥ್
ಸಂಜೆ 4:00 ಗಂಟೆ: ಲಾನ್ ಬೌಲ್ – ಪುರುಷರ ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ ಭಾರತ-ಸ್ಕಾಟ್ಲೆಂಡ್
ಸಂಜೆ 4:00 ಗಂಟೆ: ಲಾನ್ ಬೌಲ್ – ಮಹಿಳೆಯರ ವಿಭಾಗ ತಾನಿಯಾ ಚೌಧರಿ
ಸಂಜೆ 4:03 ಗಂಟೆ: ಈಜು – ಪುರುಷರ 50 ಮೀ ಬಟರ್‌ಫ್ಲೈ ಹೀಟ್‍ನಲ್ಲಿ ಸಜನ್ ಪ್ರಕಾಶ್
ಸಂಜೆ 4:12 ಗಂಟೆ: ಸೈಕ್ಲಿಂಗ್ – ಮಹಿಳಾ ತಂಡ ಸ್ಪ್ರಿಂಟ್ ಅರ್ಹತೆ
ಸಂಜೆ 4:29 ಗಂಟೆ: ಈಜು – ಶ್ರೀಹರಿ ನಟರಾಜ್ – ಪುರುಷರ 100 ಮೀ ಬ್ಯಾಕ್‍ಸ್ಟ್ರೋಕ್ ಹೀಟ್

ಸಂಜೆ 4:30 ಗಂಟೆ: ಟೇಬಲ್ ಟೆನಿಸ್ – ಭಾರತ-ಬಾರ್ಬಡೋಸ್
ಸಂಜೆ 4:30 ಗಂಟೆ: ಜಿಮ್ನಾಸ್ಟಿಕ್ಸ್ – ಅರ್ಹತಾ ಸುತ್ತು ಯೋಗೇಶ್ವರ್ ಸಿಂಗ್, ಸತ್ಯಜಿತ್ ಮೊಂಡಲ್, ಸೈಫ್ ತಾಂಬೋಲಿ
ಸಂಜೆ 4:46 ಗಂಟೆ: ಸೈಕ್ಲಿಂಗ್ – ಪುರುಷರ ತಂಡ ಸ್ಪ್ರಿಂಟ್ ಅರ್ಹತೆ
ಸಂಜೆ 5:00 ಗಂಟೆ: ಬಾಕ್ಸಿಂಗ್ – ಶಿವ ಥಾಪಾ
ಸಂಜೆ 6:30 ಗಂಟೆ: ಬ್ಯಾಡ್ಮಿಂಟನ್ – ಭಾರತ-ಪಾಕಿಸ್ತಾನ ಮಿಶ್ರ ಡಬಲ್ಸ್
ಸಂಜೆ 6:30 ಗಂಟೆ: ಮಹಿಳೆಯರ ಹಾಕಿ – ಭಾರತ-ಘಾನಾ
ರಾತ್ರಿ 7:00 ಗಂಟೆ: ಟ್ರಯಥ್ಲಾನ್ – ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್ ಸಂಜನಾ ಮತ್ತು ಪ್ರಜ್ಞಾ ಮೋಹನ್
ರಾತ್ರಿ 7:30 ಗಂಟೆ: ಲಾನ್ ಬೌಲ್ – ಮಹಿಳೆಯರ ಫೋರ್ಸ್ ವಿಭಾಗೀಯ ಆಟ ಭಾರತ-ಕುಕ್ ಐಲ್ಯಾಂಡ್ಸ್
ರಾತ್ರಿ 8:30 ಗಂಟೆ: ಟೇಬಲ್ ಟೆನ್ನಿಸ್ – ಮಹಿಳೆಯರ ವಿಭಾಗ ಭಾರತ-ಫಿಜಿ
ರಾತ್ರಿ 9:50 ಗಂಟೆ: ಸೈಕ್ಲಿಂಗ್ – ಪುರುಷರ ತಂಡ 4,000ಮೀ. ಪರ್ಸ್ಯೂಟ್ ಫೈನಲ್
ರಾತ್ರಿ 10:25 ಗಂಟೆ: ಸೈಕ್ಲಿಂಗ್ – ಮಹಿಳೆಯರ ತಂಡ 4,000 ಮೀ. ಪರ್ಸ್ಯೂಟ್ ಫೈನಲ್,
ರಾತ್ರಿ 10:30 ಗಂಟೆ: ಲಾನ್ ಬೌಲ್ – ಭಾರತ-ಫಾಕ್ಲ್ಯಾಂಡ್ ದ್ವೀಪಗಳು ಪುರುಷರ ಜೋಡಿ,
ರಾತ್ರಿ 10:33 ಗಂಟೆ: ಸೈಕ್ಲಿಂಗ್ – ಪುರುಷರ ತಂಡ ಸ್ಪ್ರಿಂಟ್ ಫೈನಲ್,
ರಾತ್ರಿ 11:00 ಗಂಟೆ: ಟೇಬಲ್ ಟೆನಿಸ್ – ಭಾರತ-ಸಿಂಗಾಪುರ ಪುರುಷರ ತಂಡ,
ರಾತ್ರಿ 11:00 ಗಂಟೆ: ಸ್ಕ್ವಾಷ್ – ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್,
ರಾತ್ರಿ 11:45 ಗಂಟೆ: ಸ್ಕ್ವಾಷ್ – ಅಭಯ್ ಸಿಂಗ್ ಪುರುಷರ ಸಿಂಗಲ್ಸ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *