CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

Public TV
1 Min Read

ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ 20ರ ಹರೆಯದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಫೈನಲ್‍ನಲ್ಲಿ ಲಕ್ಷ್ಯ ಸೇನ್, ಮಲೇಷ್ಯಾದ ಎನ್‍ಜಿ ಟ್ಜೆ ಯೋಂಗ್ ಅವರನ್ನು 19-21, 21-9, 21-16 ಸೆಟ್‍ಗಳಿಂದ ಸೋಲಿಸಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

ಈ ಮೂಲಕ ಲಕ್ಷ್ಯ ಸೇನ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ 4ನೇ ಭಾರತೀಯ ಬ್ಯಾಡ್ಮಿಂಟನ್ ಪುರುಷ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೊದಲು 1978 ಪ್ರಕಾಶ್ ಪಡುಕೋಣೆ, 1982 ಸೈಯದ್ ಮೋದಿ,  2014 ಪರುಪಳ್ಳಿ ಕಶ್ಯಪ್ ಪದಕ ಗೆದ್ದಿದ್ದರು. ಆ ಬಳಿಕ ಇದೀಗ 2022 ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಲಕ್ಷ್ಯ ಸೇನ್ ಈ ಸಾಧನೆ ಮಾಡಿದ್ದಾರೆ.

ಈ ಮೊದಲು ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‍ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *