ಡಿವೋರ್ಸ್‌ಗೆ ಇವೇ ಮುಖ್ಯ ಕಾರಣಗಳು..

Public TV
2 Min Read

ದಾಂಪತ್ಯದಲ್ಲಿ ಸರಳ, ವಿರಸ, ಜಗಳ ಎಲ್ಲವೂ ಇರುತ್ತದೆ. ಸುಖ, ಸಂತೋಷ, ಕೋಪ, ದುಃಖ ಸಂಸಾರದ ಅವಿಭಾಜ್ಯ ಅಂಗ ಎಂದರೂ ತಪ್ಪಾಗಲಾರದು. ಜಗಳವಾಡುವ ದಂಪತಿಗಳೆಲ್ಲಾ ಪರಸ್ಪರ ಬೇರಾಗುತ್ತಾರೆ ಎನ್ನಲಾಗುವುದಿಲ್ಲ. ಅನ್ಯೋನ್ಯವಾಗಿರುವವರು ಜೀವನಪೂರ್ತಿ ಹಾಗೆಯೇ ಇರುತ್ತಾರೆ ಎಂದುಕೊಳ್ಳುವುದೂ ತಪ್ಪು. ಕೆಲವೊಂದು ಸನ್ನಿವೇಶಗಳು ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತವೆ. ಸಾಮಾನ್ಯವಾಗಿ ವಿಚ್ಛೇದನಕ್ಕೆ ಇವೇ ಮುಖ್ಯ ಕಾರಣಗಳಾಗಿರುತ್ತವೆ.

ಡಿವೋರ್ಸ್‌ಗಾಗಿ (Divorce) ಪೊಲೀಸ್‌ ಠಾಣೆ, ಕೋರ್ಟ್‌ ಮೆಟ್ಟಿಲೇರುವ ಬಹುಪಾಲು ಮಂದಿ ಇದೇ ಕಾರಣಗಳನ್ನು ನೀಡಿದ್ದಾರಂತೆ. ದಾಂಪತ್ಯದಲ್ಲಿ ಬಿರುಕುಂಟು ಮಾಡುವಂತಹ ಸನ್ನಿವೇಶಗಳು ಯಾವುವು ಗೊತ್ತಾ? ಇದನ್ನೂ ಓದಿ: ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

ಸಂವಹನದ ಕೊರತೆ
ದಾಂಪತ್ಯದಲ್ಲಿ ಸಂವಹನ ಎಂದರೆ, ಜಗಳ ಮಾಡುವುದು, ವಾದಕ್ಕಿಳಿಯುವುದು, ಅಸಮಾಧಾನ ವ್ಯಕ್ತಪಡಿಸುವುದಲ್ಲ. ಸಂಸಾರದಲ್ಲಿ ಮೌನ ವಹಿಸುವುದೂ ಸರಿಯಲ್ಲ. ಈ ನಡೆ ಪ್ರತ್ಯೇಕತೆ ಮತ್ತು ವಿಚ್ಛೇದನಕ್ಕೆ ದಾರಿ ಮಾಡುತ್ತದೆ. ಸಂಸಾರದಲ್ಲಿ ಸಂವಹನ ಅತ್ಯಂತ ನಿರ್ಣಾಯಕ. ಸಂಬಂಧವನ್ನು ಬಲಪಡಿಸಿಕೊಳ್ಳಲು ದಾರಿ ಮಾಡುತ್ತದೆ. ಪರಸ್ಪರರು ಭಾವನೆಗಳನ್ನು ಹಂಚಿಕೊಳ್ಳದಿದ್ದರೆ ಒಂಟಿತನ, ಪ್ರತ್ಯೇಕತೆ ಭಾವನೆ ಮೂಡಿಸುತ್ತದೆ. ಸಂವಹನದ ಕೊರತೆ ದಾಂಪತ್ಯವನ್ನು ಒಡೆಯುತ್ತದೆ.

ಸದಾ ಜಗಳ
ಬಾಳಸಂಗಾತಿಯೊಂದಿಗೆ ಸದಾ ಜಗಳವಾಡುವುದು, ನಾಕಾರಾತ್ಮಕವಾಗಿ ಮಾತನಾಡುವುದು ದಾಂಪತ್ಯಕ್ಕೆ ನಿಜವಾಗಿಯೂ ವಿನಾಶಕಾರಿ. ಕಾಲುಕೆರೆದು ಜಗಳ ಮಾಡುವುದು ಸುಖಿ ದಾಂಪತ್ಯಕ್ಕೆ ತಕ್ಕುದಲ್ಲ. ಇದು ಸಂಸಾರದ ನೆಮ್ಮದಿ ಹಾಳು ಮಾಡುತ್ತದೆ. ಇಂತಹ ವಾತಾವರಣದಲ್ಲಿ ಯಾರೂ ಇರಲು ಇಷ್ಟ ಪಡುವುದಿಲ್ಲ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

ಅಕ್ರಮ ಸಂಬಂಧ
ಸುಖ ಸಂಸಾರವೊಂದರಲ್ಲಿ ಮತ್ತೊಬ್ಬರ ಎಂಟ್ರಿಯಾದರೆ, ಅದು ದಾಂಪತ್ಯ ಬಿರುಕಿಗೆ ಕಾರಣವಾಗುತ್ತದೆ. ದೈಹಿಕ, ಲೈಂಗಿಕ ಆಸಕ್ತಿಗೆ ಹೊರಗಡೆ ಸಂಬಂಧ ಇಟ್ಟುಕೊಳ್ಳುವುದರಿಂದ ತಮ್ಮ ಸಂಸಾರದ ಸಂಬಂಧ ನಾಶವಾಗುತ್ತದೆ.

ಹಣಕಾಸಿನ ಕೊರತೆ
ಮದುವೆಯಾದ ಮೇಲೆ ಸಂಸಾರ ನಿಭಾಯಿಸುವುದು ಅಷ್ಟು ಸುಲಭವಲ್ಲ. ದಾಂಪತ್ಯದಲ್ಲಿ ಬರೀ ಪ್ರೀತಿಯಷ್ಟೇ ಅಲ್ಲ, ಹಣಕಾಸಿನ ವಿಚಾರ ಕೂಡ ಮುಖ್ಯವಾಗುತ್ತದೆ. ಹಣಕಾಸಿನಲ್ಲಿ ಹೊಂದಾಣಿಕೆ ಕೊರತೆಯು ಶೇ.41 ರಷ್ಟು ಸಂಸಾರಗಳ ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಸಮೀಕ್ಷೆಗಳು ಹೇಳಿವೆ.

ಆತ್ಮೀಯತೆ ಕೊರತೆ
ಯಾರೇ ಆಗಲಿ, ತಮ್ಮ ಸಂಗಾತಿಯೊಂದಿಗೆ ಆತ್ಮೀಯತೆಯ ಬಾಂಧವ್ಯವನ್ನು ನಿರೀಕ್ಷಿಸುತ್ತಾರೆ. ಸಂಗಾತಿಯೊಂದಿಗಿನ ಪ್ರೀತಿ, ಆತ್ಮೀಯತೆ, ಸಂಪರ್ಕದ ಕೊರತೆಯು ದಾಂಪತ್ಯವನ್ನು ಬೇಗನೆ ಹಾಳು ಮಾಡುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

ಬೇಗ ಮದುವೆ ಮಾಡುವುದು
ಒಂದು ಸಂಸಾರ ಚೆನ್ನಾಗಿ ನಡೆಯಬೇಕು ಎಂದರೆ, ಮದುವೆ ಮಾಡುವಾಗ ಕೆಲವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅನೇಕರು ತಮ್ಮ ಸಂಗಾತಿಯನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿರುತ್ತಾರೆ. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಾರೆ. ಪೋಷಕರ ಒತ್ತಡ ಅಥವಾ ಹಠಾತ್ ನಿರ್ಧಾರಗಳಿಂದ ಕೆಲವೊಮ್ಮೆ ಬೇಗ ಮದುವೆ ಆಗಬಹುದು. ಬಾಳಸಂಗಾತಿ ಆಯ್ಕೆಗೆ ಒಂದಷ್ಟು ಸಮಯಾವಕಾಶ ನೀಡದಿರುವುದು, ಮುಂದೆ ವಿಚ್ಛೇದನದಂತಹ ದಾರಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *