ಕನ್ನಡ ಕಿರುತೆರೆಯಲ್ಲಿ ‘ಕಾಮಿಡಿ ಗ್ಯಾಂಗ್ಸ್’ ಹಾವಳಿ

Public TV
2 Min Read

ನ್ನಡ ಕಿರುತೆರೆಯಲ್ಲಿ ಸದ್ಯ ನಗೆಹಬ್ಬಗಳದ್ದೇ ಹಾವಳಿ. ಬಹುತೇಕ ಟಿವಿ ಚಾನೆಲ್ ಗಳಲ್ಲಿ ಕಾಮಿಡಿ ಶೋಗಳು ಶುರುವಾಗಿವೆ. ಇದೀಗ ಸುವರ್ಣ ಮನರಂಜನಾ ವಾಹಿನಿಯು ಕೂಡ ‘ಕಾಮಿಡಿ ಗ್ಯಾಂಗ್ಸ್’ ಎಂಬ ವಿನೂತನ ಕಾಮಿಡಿ ಶೋ ಪ್ರಾರಂಭ ಮಾಡಿದೆ. ಇಂದಿನಿಂದ ರಾತ್ರಿ 9 ಗಂಟೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಮನೆ ಮನದಲ್ಲಿ ಕಾಮಿಡಿ ಕಚಗುಳಿಯ ರಂಗೇರಲಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

ಕರುನಾಡಿನಾದ್ಯಂತ ಆಯ್ಕೆಯಾಗಿ ಬಂದಿರುವ ಕಂಟೆಸ್ಟೆಂಟ್ಸ್,  ಅವರಿಗೆ ಸ್ಕಿಟ್ ಕೊಡುವ ರೈಟರ್ಸ್, ಅವರ ಕಾಮಿಡಿಯ ಕಾಗುಣಿತ ತಿದ್ದುತಿರುವ ಮೆಂಟರ್ಸ್, ಇವರೆಲ್ಲರ ಪರಿಪೂರ್ಣ ಪ್ರದರ್ಶನದ ಹೊಣೆ ಹೊತ್ತಿರುವ ಕ್ಯಾಪ್ಟನ್ಸ್ ಇದೇ ಕಾಮಿಡಿ ಗ್ಯಾಂಗ್ಸ್ ವಿಶೇಷತೆ. ಒಟ್ಟು 6 ತಂಡಗಳು ಪ್ರತಿ ಶನಿವಾರ ಮತ್ತು ಭಾನುವಾರ ಒಂದಿಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾದ ವಿಡಂಬನೆಗಳ ಮೂಲಕ, ನಗು ಹಂಚಲಿದ್ದಾರೆ. ಈ ಶೋನ ವಿಶೇಷತೆ ಅಂದರೆ ‘ಕಾಮಿಡಿ ಗ್ಯಾಂಗ್ಸ್’ ನಲ್ಲಿ ಎಲಿಮಿನೇಷನ್ ಇರುವುದಿಲ್ಲ. ಈ ಸ್ಕಿಟ್ ಗಳಿಗೆ ಸ್ಕೋರ್ ನೀಡಲಾಗುವುದು, ಅಂತಿಮವಾಗಿ ಅಧಿಕ ಅಂಕಗಳನ್ನು ಪಡೆವ ಗ್ಯಾಂಗ್ ಗೆ ಗೆಲುವು ಸಿಗಲಿದೆ.  ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಖ್ಯಾತ ನಟಿ ಶ್ರುತಿ ಹರಿಹರನ್ ಮತ್ತು ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಇರುತ್ತಾರೆ.  ಇನ್ನು ಕಾರ್ಯಕ್ರಮದ ನಿರೂಪಕರಾಗಿರುವ ಶಿವರಾಜ್ ಕೆ. ಆರ್. ಪೇಟೆ, ಇದೇ ಮೊದಲ ಬಾರಿಗೆ ಕಿರುತೆರೆಯ ಹೋಸ್ಟ್ ಆಗಿದ್ದಾರೆ.  ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

ಈ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಚಂದ್ರು, ‘ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ, ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ;ಡಿವಿಜಿಯವರು ಹೇಳಿದ ಹಾಗೆ ನಗು ಹಂಚುವ ಕೆಲಸ ಸ್ಟಾರ್ ಸುವರ್ಣ ಮಾಡ್ತಿದೆ, ನಾನು ಈ ಕಾರ್ಯಕ್ರಮದ ಭಾಗಾವಾಗಿರೋದು ತುಂಬಾ ಖುಷಿಯ ವಿಚಾರ, ‘ಕಾಮಿಡಿ ಗ್ಯಾಂಗ್ಸ್’ ಮೇಲೆ ನನಗೆ ಬಹಳ ಭರವಸೆಯಿದ್ದು, ಜನರಿಗೆ ಖಂಡಿತ ಇಷ್ಟವಾಗುತ್ತ’ ಎನ್ನುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *