ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಂದ ಶಿಕ್ಷಕ

Public TV
2 Min Read

ಮುಂಬೈ: ಕಾಲೇಜ್ ಶಿಕ್ಷಕನೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

ವೈಶಾಲಿ ಮುಲಿಕ್ (21) ಕೊಲೆಯಾದ ವಿದ್ಯಾರ್ಥಿನಿ. ಆರೋಪಿಯನ್ನು 27 ವರ್ಷದ ರಿಷಿಕೇಶ್ ಮೋಹನ್ ಕುಡಲ್ಕರ್ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ವೈಶಾಲಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಆರು ತಿಂಗಳ ಮಗು ಕೂಡ ಇತ್ತು. ವೈಶಾಲಿ ತನ್ನ ಶಿಕ್ಷಣವನ್ನು ಮುಂದುವರಿಸಬೇಕೆಂದು ಬಯಸಿದಳು. ಅದರಂತೆಯೇ ಮೃತ ವಿದ್ಯಾರ್ಥಿನಿ ಸಾಂಗ್ಲಿಯಲ್ಲಿರುವ ಯಶ್ವಂತ್ರಾವ್ ಚವಾಣ್ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಭಾನುವಾರ ಕಾಲೇಜಿನ ಮೂರನೇ ಮಹಡಿಯಲ್ಲಿ ವೈಶಾಲಿಯ ಮೃತ ದೇಹ ಪತ್ತೆಯಾಗಿತ್ತು.

ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎನ್ನುವ ಫಲಿತಾಂಶ ಬಂದಿದೆ. ತಕ್ಷಣ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಕಾಲೇಜಿನ ಸಿಸಿಟಿವಿಯ ತುಣುಕನ್ನು ಪರಿಶೀಲಿಸಿದರು. ಅದರಲ್ಲಿ ಒಬ್ಬ ಮನುಷ್ಯ ಮತ್ತು ವೈಶಾಲಿ ತರಗತಿ ಒಳಗೆ ಹೋಗಿದ್ದು, 15 ನಿಮಿಷಗಳ ನಂತರ ಕೇವಲ ಮನುಷ್ಯ ಹೊರಬಂದಿರುವುದು ಸೆರೆಯಾಗಿತ್ತು.

ಪೊಲೀಸರು ಸಿಸಿಟಿಯಲ್ಲಿದ್ದ ವ್ಯಕ್ತಿಯನ್ನು ರಿಷಿಕೇಶ್ ಮೋಹನ್ ಕುಡಲ್ಕರ್ ಗುರುತಿಸಿದ್ದು, ತಕ್ಷಣ ಕ್ರೈಂ ಬ್ರಾಂಚ್ ಆತನಿಗಾಗಿ ಹುಡುಕಾಟ ಶುರುಮಾಡಿದ್ದರು. ಕೊನೆಗೆ ಆತನನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಬಂಧಿಸಿದ್ದರು.

ಆರೋಪಿ ಕಸ್ಬಿಡಿಗ್ರಾಜ್ ನಿವಾಸಿಯಾಗಿದ್ದು, ಯಶ್ವಂತ್ರಾವ್ ಚವಾಣ್ ಮುಕ್ತ ವಿವಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಮೃತ ವೈಶಾಲಿ ಮತ್ತು ಶಿಕ್ಷಕ ಒಂದೇ ಗ್ರಾಮದವರಾಗಿದ್ದು ಪರಸ್ಪರ ಇಬ್ಬರಿಗೂ ಪರಿಚಯ ವಿತ್ತು. ಇಬ್ಬರ ಮಧ್ಯೆ ಸಂಬಂಧವೂ ಇತ್ತು ಎಂದು ವರದಿಯಾಗಿದೆ.

ಅಷ್ಟೇ ಅಲ್ಲದೇ ಮೃತ ವೈಶಾಲಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ರಿಷಿಕೇಶ್ ಅನುಮಾನಗೊಂಡಿದ್ದಾನೆ. ಬಳಿಕ ಇದರಿಂದ ಕೋಪಗೊಂಡು ತರಗತಿಯ ಒಳಗೆ ಕರೆದುಕೊಂಡು ಹೋಗಿ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆಗ ವೈಶಾಲಿ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡು ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *