ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ವಿಚಿತ್ರ ಚಾಲೆಂಜ್‍ಗಳನ್ನ ಮಾಡೋಡು ಕಾಮನ್ ಆಗಿಬಿಟ್ಟಿದೆ. ಈಗ ಜಿರಳೆಯನ್ನು ಮುಖದ ಮೇಲೆ ಬಿಟ್ಟುಕೊಂಡು ಸೆಲ್ಫಿ ಹಾಕುವ ಹೊಸ ಚಾಲೆಂಜ್ ಸಖತ್ ಸದ್ದು ಮಾಡುತ್ತಿದೆ.
ಹೌದು, ಮನೆಯಲ್ಲಿ ಜಿರಳೆ ಕಂಡರೆ ಹಿಟ್ ಅಥವಾ ಬೇರೆ ಏನಾದರೂ ಔಷಧಿ ಹೊಡೆದು ಸಾಯಿಸುತ್ತಾರೆ. ಆದ್ರೆ ಈಗ ಕಾಕ್ರೋಚ್ ಚಾಲೆಂಜ್ ಎಂದು ಶುರುಮಾಡಿ ಜಿರಳೆಯನ್ನ ಮುಖದ ಮೇಲೆ ಬಿಟ್ಕೋತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ಅಲೆಕ್ಸ್ ಅಂಗ್ ಎಂಬಾತ ಶುರುಮಾಡಿದ ಜಿರಳೆ ಚಾಲೆಂಜ್ ಇದೀಗ ಫುಲ್ ಫೇಮಸ್ಸಾಗುತ್ತಿದೆ. ಮುಖದ ಮೇಲೆ ಜೀರಳೆ ಬಿಟ್ಟುಕೊಂಡು ಅದರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಈ ಚಾಲೆಂಜ್‍ನ ವಿಶೇಷವಾಗಿದೆ.
ಏ.20ರಂದು ಇದನ್ನು ಪೋಸ್ಟ್ ಮಾಡಿದ್ದ ಅಂಗ್ ನೀವು ಹೀಗೆ ಮಾಡಲು ಸಾಧ್ಯವೇ? ನೆಟ್ಟಿಗರನ್ನು ಎಂದು ಪ್ರಶ್ನೆ ಮಾಡಿದ್ದ. ಆದಾದ ಬಳಿಕ ಈ ಚಾಲೆಂಜ್ ವೈರಲ್ ಆಗಿದ್ದು, ಯುವ ಪೀಳಿಗೆ ಈ ಚಾಲೆಂಜ್‍ನನ್ನು ಸ್ವಿಕರಿಸಿದ್ದಾರೆ. ಅಲ್ಲದೆ ತಮ್ಮ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ಸೆಲ್ಫಿ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಈವರೆಗೆ ಅಲೆಕ್ಸ್ ಅಂಗ್ ಹಾಕಿದ್ದ ಜಿರಳೆ ಚಾಲೆಂಜ್ ಫೋಸ್ಟ್ ಅನ್ನು 18 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.