ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸಾಧನಾ ಸಮಾವೇಶದಲ್ಲಿ (Sadhana Samavesh) ಸಿಎಂ ಭಾಷಣ ಮಾಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸ್ವಾಗತ ಕೋರಲು ಹಿಂದೇಟು ಹಾಕಿದ ಪ್ರಸಂಗ ಕಂಡುಬಂದಿತು.
ಮುಖ್ಯಮಂತ್ರಿಗಳು ಸ್ವಾಗತ ಭಾಷಣ ಮಾಡುವ ವೇಳೆ ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಕೋರುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ (Siddaramaiah), ಡಿಕೆಶಿ ಇಲ್ಲಿ ಇಲ್ವಲ್ಲಾ.. ಶಿವಕುಮಾರ್ ಬೆಂಗಳೂರಿಗೆ ಹೋಗ್ತಿನಿ ಅಂತಾ ಹೋದ್ರು. ಅವರು ವೇದಿಕೆಯ ಮೇಲಿಲ್ಲ ಹೀಗಾಗಿ ಅವರ ಹೆಸರು ಹೇಳಲಿಲ್ಲ ಅಂತ ಹೇಳಿದ್ರು. ವೆಲ್ಕಮ್ ಮಾಡೋದು ವೇದಿಕೆ ಮೇಲೆ ಇರುವವರಿಗೆ, ಮನೆಯಲ್ಲಿ ಕೂತೋರಿಗೆಲ್ಲ ವೆಲ್ಕಮ್ ಮಾಡೋಕಾಗಲ್ಲ ಅಂತ ಗದರಿದರು. ಇದನ್ನೂ ಓದಿ: ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?
ಮುಂದುವರಿದು. ಬಿಜೆಪಿ, ಜೆಡಿಎಸ್ ಮುಖಂಡರೂ (BJP JDS Leaders) ಈ ವೇದಿಕೆಯಲ್ಲಿ ಇರಬೇಕಿತ್ತು. ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ ಅಂತ ಜೆಡಿಎಸ್ – ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹಣಕಾಸು ಸಚಿವರಾದಾಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರ್ತಾಳೆ: ಮಲ್ಲಿಕಾರ್ಜುನ ಖರ್ಗೆ
ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲ್ತುಳಿತಕ್ಕೆ ಪೊಲೀಸ್ ಇಲಾಖೆ ಒಳಗಿನ ರಾಜಕೀಯ ಕಾರಣ.. ಕೊಹ್ಲಿ ಬಲಿಪಶು ಆಗಿದ್ದಾರೆ: ಮಾಜಿ DySP ಅನುಪಮಾ ಶೆಣೈ