ಸಿಎಂ ರಾಜೀನಾಮೆ ದಿನ ಇಂದೇ ನಿರ್ಧಾರ?

Public TV
1 Min Read

ಬೆಂಗಳೂರು: ಸತತ ಮನವೊಲಿಕೆ ಪ್ರಯತ್ನದ ನಂತರವೂ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಇಂದು ಮುಂಬೈಗೆ ಹಾರಿದ್ದರಿಂದ ಸಿಎಂ ಅಧಿಕಾರದ ಆಸೆ ಬಿಟ್ಟಿದ್ದು, ಸಿಎಂ ರಾಜೀನಾಮೆ ಡೇಟ್ ಇವತ್ತೇ ಡಿಸೈಡ್ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಎಂಟಿಬಿ ಡ್ರಾಮಾ ಕಂಡು ಸಿಎಂ ಮುಜುಗರಕ್ಕೆ ಒಳಗಾಗಿ ತಮ್ಮ ಆಪ್ತ ಸಚಿವರ ಬಳಿ ತನಗೆ ಆದ ಅವಮಾನದ ಬಗ್ಗೆ ಹಂಚಿಕೊಂಡಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಸರ್ಕಸ್ ಬೇಡ. ಇಂದು ದೇವೇಗೌಡರ ಜೊತೆ ಮಾತನಾಡಿ ಇದನ್ನು ಫೈನಲ್ ಮಾಡುತ್ತೀನಿ ಎಂದು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಸಿಎಂ ಅವರ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿ ಲಭ್ಯವಾಗಿದೆ.

ನೋಡೋಣ ಸಯಮ ಇದೆ ಎಂದು ಸಿಎಂ ಅವರ ಆಪ್ತ ಹೇಳಿದ್ದಾರೆ. ಅದಕ್ಕೆ ಸಿಎಂ, ಬೇಡ ಇನ್ನು ಮುಜುಗರ ಆಗುತ್ತದೆ. ಯಾರೊಬ್ಬ ಅತೃಪ್ತ ಶಾಸಕರು ಕೂಡ ವಾಪಸ್ ಬರುವ ಸ್ಥಿತಿಯಲ್ಲಿ ಇಲ್ಲ. ಛಾನ್ಸ್ ತೆಗೆದುಕೊಳ್ಳೋದು ಬೇಡ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದೇ ರಾಜೀನಾಮೆ ನೀಡುವ ದಿನ ನಿರ್ಧಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ರಾಜೀನಾಮೆ ತೀರ್ಮಾನಕ್ಕೆ ಕಾರಣವೇನು?
ಮುಂಬೈಗೆ ಹೋದ ಅತೃಪ್ತ ಶಾಸಕರು ವಾಪಸ್ ಆಗುವ ಲಕ್ಷಣ ಕಾಣುತ್ತಿಲ್ಲ. ಕಾಂಗ್ರೆಸ್‍ನ ಅಸಮಾಧಾನಿತ ಶಾಸಕರ ಸಿಟ್ಟು ತಣ್ಣಗಾಗುವ ಲಕ್ಷಣವೂ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಛಾನ್ಸ್ ತೆಗೆದುಕೊಳ್ಳುವುದು ಬೇಡ. ಇದರ ಜೊತೆಗೆ ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಒಳರಾಜಕೀಯದಿಂದ ಸಿಎಂ ಬೇಸರಗೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಅವರ ರಾಜಕೀಯದ ಬಗ್ಗೆಯೂ ಬೇಸರವಾಗಿದ್ದಾರೆ. ಈ ಎಲ್ಲ ಕಾರಣದಿಂದ ಸುಮ್ಮನೆ ಹಗ್ಗಜಗ್ಗಾಟದ ಬದಲು ಅಧಿಕಾರ ಬಿಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಸಿಎಂ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಸಿಎಂ ತನ್ನ ತಂದೆ ದೇವೇಗೌಡರ ಜೊತೆ ಮಾತುಕತೆ ನಡೆಸಲು ಅವರ ನಿವಾಸಕ್ಕೆ ತೆರಳಿದ್ದು, ದೇವೇಗೌಡರ ಜೊತೆ ಚರ್ಚೆ ಮಾಡಿದ ಬಳಿಕ ಕಾಂಗ್ರೆಸ್‍ನ ಹಿರಿಯ ನಾಯಕರ ಜೊತೆ ತಮ್ಮ ನಿರ್ಧಾರವನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *