ಬಿಜೆಪಿಯವರು ಉಗ್ರರು ಎಂದು ಹೇಳಿಕೆ ನೀಡಿ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಎಸಿಬಿ-ಕೇಸ್ ಪಾಲಿಟಿಕ್ಸ್, ಫೋನ್ ಟ್ಯಾಪಿಂಗ್ ಪಾಲಿಟಿಕ್ಸ್, ಮರ್ಡರ್ ಪಾಲಿಟಿಕ್ಸ್, ಹಿಂದೂ ಪಾಲಿಟಿಕ್ಸ್ ಎಲ್ಲಾ ಆಯ್ತು. ಈಗ ಟೆರರ್ ಪಾಲಿಟಿಕ್ಸ್ ಆರಂಭವಾಗಿದೆ.

ಬಿಜೆಪಿ – ಆರ್ ಎಸ್ ಎಸ್ ನವರು ಉಗ್ರಗಾಮಿಗಳು ಎಂದು ಬುಧವಾರ ಚಾಮರಾಜನಗರದ ನಾಗವಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮುಖ್ಯಮಂತ್ರಿಯ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ #ನಾನುಉಗ್ರಗಾಮಿನಮ್ಮನ್ನುಬಂಧಿಸಿ #ArrestMeSiddaramaiah ಎಂಬ ಹ್ಯಾಶ್‍ಟ್ಯಾಗ್ ಮಾಡಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಅಭಿಯಾನ ದೇಶದ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ. ಅಲ್ಲದೇ ನಾಳೆಯಿಂದ `ಜೈಲ್ ಭರೋ’ ಚಳವಳಿಗೆ ಕರೆ ನೀಡಿದ್ದು, ನಾಳೆ ವಿವೇಕಾನಂದ ಜಯಂತಿ ಇರುವ ಕಾರಣ ಚಳುವಳಿಯನ್ನು ಬೆಂಗಳೂರಿನಲ್ಲಿ ಶನಿವಾರಕ್ಕೆ ಮುಂದೂಡಲಾಗಿದ್ದು, ಜಿಲ್ಲೆಗಳಲ್ಲಿ ಜೈಲ್‍ಭರೋ ಚಳುವಳಿ ನಡೆಯಲಿದೆ.

ಆದರೆ ಇಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಅರಿತು ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾನು ಬಿಜೆಪಿ ಮತ್ತು ಆರ್ ಎಸ್ ಎಸ್ ಅವರನ್ನು ಉಗ್ರಗಾಮಿಗಳು ಎಂದು ಕರೆದಿಲ್ಲ. ಹಿಂದುತ್ವ ಉಗ್ರವಾದಿಗಳು ಎಂದು ಕರೆದಿದ್ದು ಎಂದು ಸ್ಪಷ್ಟನೆ ನೀಡಿದರು. ನಂತರ ಇಂದು ಮಧ್ಯಾಹ್ನ ವೇಳೆ ಮೈಸೂರಲ್ಲಿ ಮಾತನಾಡಿ ಕುಂಬಳಕಾಯಿ ಕಳ್ಳ ಅಂದರೆ ಇವರು ಏಕೆ ಹೆಗಲು ಮುಟ್ಟಿಕೊಳ್ಳುತ್ತಾರೆ. ಮನುಷ್ಯತ್ವ ಇಲ್ಲದವರು ಹಿಂದುತ್ವದ ಉಗ್ರಗಾಮಿಗಳು ಅಂದಿದ್ದೇನೆ ಎಂದರು.

https://twitter.com/ShobhaBJP/status/951452747596890112

https://twitter.com/ShobhaBJP/status/951374086680150016

 

https://www.youtube.com/watch?v=dm9R0VQ5oe0

 

Share This Article
Leave a Comment

Leave a Reply

Your email address will not be published. Required fields are marked *