ಒಳಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ – ವಿಧಾನಸಭೆಯಲ್ಲಿ ಚರ್ಚೆಗೆ ಸಿಗದ ಅವಕಾಶ

Public TV
1 Min Read

ಬೆಂಗಳೂರು: ರಾಜ್ಯದ ದಲಿತ ಸಮುದಾಯದ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿ (Internal Reservation) ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಧಾನಸಭೆಯಲ್ಲಿ (Legislative Assembly) ಅಧಿಕೃತವಾಗಿ ಘೋಷಿಸಿದ್ದಾರೆ.

ಎಡಗೈ-ಬಲಗೈ ಸಮೂಹದ ಉಪ ಜಾತಿಗಳಿಗೆ ತಲಾ 6% ಕೊಟ್ಟಿದ್ದೇವೆ. ಅದೇ ರೀತಿ, ಸ್ಪೃಶ್ಯ ಸಮೂಹಗಳಿಗೆ ಆದಿ ಕರ್ನಾಟಕ/ದ್ರಾವಿಡ/ಆಂಧ್ರ ಉಪಜಾತಿಗಳನ್ನು ಸೇರಿಸಿ 5% ಮೀಸಲಾತಿ ಕೊಡಲು ತೀರ್ಮಾನಿಸಿದ್ದೇವೆ ಅಂತ ಹೇಳಿದ್ದಾರೆ. ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಅಂತ ಪಂಜಾಬ್ ಹೈಕೋರ್ಟ್ ಆದೇಶ ಇದೆ. 1.05 ಕೋಟಿ ಜನರ ಸಮೀಕ್ಷೆ ಮಾಡಲಾಗಿದೆ. ನಾಗಮೋಹನದಾಸ್ ಶಿಫಾರಸುಗಳನ್ನು ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕರಿಸಿದ್ದೇವೆ. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಂಡು ಒಳಮೀಸಲಾತಿ ಒದಗಿಸಲಾಗಿದೆ ಅಂತ ವಿವರಣೆ ನೀಡಿದರು. ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚನೆ, ಒಳ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಿಸಿದ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ ಅಂತ ಸಿಎಂ ಹೇಳಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – 22 ದಿನಗಳಲ್ಲೇ 3.35 ಕೋಟಿ ಒಡೆಯರಾದ ರಾಯರು

ಇನ್ನು, ಒಳಮೀಸಲಾತಿ ಚರ್ಚೆಗೆ ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಸ್ಪೀಕರ್ ಅವಕಾಶ ನೀಡಲಿಲ್ಲ. ಸಿಎಂ ಪಲಾಯನವಾದ ಮಾಡ್ತಿದ್ದಾರೆ ಅಂತ ಅಶೋಕ್ ಹೇಳಿದರು. 42 ವರ್ಷದ ರಾಜಕೀಯದಲ್ಲಿ ಪಲಾಯನ ಮಾಡಿಲ್ಲ. ನಿಮ್ಮನ್ನು ಕಂಡ್ರೆ ನಮಗೆ ಭಯನೇ ಇಲ್ಲ ಅಂತ ಸಿಎಂ ಕೌಂಟರ್ ಕೊಟ್ಟು ಹೊರ ನಡೆದರು. ಆಗ, ಸಿದ್ದರಾಮಯ್ಯ ನಮ್ಮ ಸಿಎಂ ಅಲ್ಲ, ಡಿಕೆಶಿಯೇ ನಮ್ಮ ಸಿಎಂ ಅಂತ ಅಶೋಕ್ ಕಿಚಾಯಿಸಿದರು. ಇದನ್ನೂ ಓದಿ: ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ

Share This Article