ಸಿಎಂ ಬಣದಿಂದ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜು – ಸಿದ್ರಾಮಯ್ಯಗೆ ಅಹಿಂದ ರತ್ನ ಘೋಷಣೆಗೆ ಸಿದ್ದತೆ

1 Min Read

– ಹೈಕಮಾಂಡ್‌ನಿಂದ ಸಿಗುತ್ತಾ ಗ್ರೀನ್ ಸಿಗ್ನಲ್?

ಬೆಂಗಳೂರು: ಕಾಂಗ್ರೆಸ್ (Congress) ಪಾಳಯದ ಪವರ್ ಶೇರಿಂಗ್ ಗೊಂದಲದ ನಡುವೆ ಮತ್ತೆ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ವಲಯ ಮುಂದಾಗಿದೆ ಎನ್ನಲಾಗಿದೆ.

ಜನವರಿ ಕೊನೆಯ ವಾರ ಬೆಂಗಳೂರಿನಲ್ಲೇ (Bengaluru) ಹಿಂದುಳಿದ ವರ್ಗಗಳ ಒಕ್ಕೂಟದಿಂದ ಅಹಿಂದ ಸಮಾವೇಶಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಶ್ರೀ ಸುತ್ತೂರು ಮಠವು ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಯ ಕೇಂದ್ರ – ಥಾವರ್‌ಚಂದ್ ಗೆಹ್ಲೋಟ್

ಬೆಂಗಳೂರಿನಲ್ಲಿ (Bengaluru) ಅಹಿಂದ ಶಕ್ತಿ ಪ್ರದರ್ಶನ ಮಾಡಿ ಸಿಎಂ ಸಿದ್ದರಾಮಯ್ಯಗೆ ಅಹಿಂದ ರತ್ನ ಘೋಷಣೆಗೆ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸದೃಢ ಭಾರತ ನಿರ್ಮಾಣಕ್ಕಾಗಿ ಮಠಗಳು ಯುವಜನತೆಗೆ ಸ್ಫೂರ್ತಿ ತುಂಬಬೇಕು – ದ್ರೌಪದಿ ಮುರ್ಮು

ಈ ಸಂದರ್ಭದಲ್ಲಿ ಅಹಿಂದ ಸಮಾವೇಶಕ್ಕೆ ಸಮ್ಮತಿಸುತ್ತಾ ಕಾಂಗ್ರೆಸ್ ಹೈ ಕಮಾಂಡ್ ಎಂಬ ಕುತೂಹಲವೂ ಹೆಚ್ಚಿದೆ. ಹಾಸನ ಸಮಾವೇಶದಲ್ಲಿ ಆದಂತೆ ಈಗಲೂ ಪಕ್ಷದ ವೇದಿಕಯ ಅಸ್ತ್ರ ಕಾಂಗ್ರೆಸ್ ಹೈಕಮಾಂಡ್ ನಿಂದ ಬಳಕೆ ಆಗುತ್ತಾ ಎಂಬ ಕುತೂಹಲವೂ ಹೆಚ್ಚಿದೆ. ಪಕ್ಷ ಹೈಕಮಾಂಡ್ ಎಲ್ಲಾ ಸೂಚನೆ ಮೀರಿ ಪ್ರತ್ಯೇಕ ಸಮಾವೇಶದಲ್ಲಿ ಸಿಎಂ ಭಾಗವಹಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

Share This Article