ಐಪಿಎಲ್‌ ಟ್ರೋಫಿಗಾಗಿ ಆರ್‌ಸಿಬಿ vs ಪಂಜಾಬ್‌ ಫೈಟ್‌ – ಟ್ಯಾಬ್‌ನಲ್ಲೇ ಪಂದ್ಯ ವೀಕ್ಷಿಸಿದ ಸಿಎಂ

Public TV
1 Min Read

ಬೆಂಗಳೂರು: ಐಪಿಎಲ್‌ 2025ರ ಪಂಜಾಬ್‌ ಕಿಂಗ್ಸ್‌ (PBKS) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ನಡುವಿನ ಹೈವೋಲ್ಟೇಜ್‌ ಫೈನಲ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಟ್ಯಾಬ್‌ನಲ್ಲೇ ವೀಕ್ಷಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ಜಿಲ್ಲಾ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಬೆಂಗಳೂರು HAL ವಿಮಾನ ನಿಲ್ದಾಣದಿಂದ Tab ನಲ್ಲೇ IPL ಫೈನಲ್ ಪಂದ್ಯ ವೀಕ್ಷಿಸಿದರು. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಇದ್ದಾಗಲೂ ಸ್ಟೇಡಿಯಂನಲ್ಲೇ ಪಂದ್ಯ ವೀಕ್ಷಿಸಿದ್ದರು. ಇದನ್ನೂ ಓದಿ: ಕೊನೆಯಲ್ಲಿ ಜಿತೇಶ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ – ಪಂಜಾಬ್‌ಗೆ 191 ರನ್‌ಗಳ ಗುರಿ ನೀಡಿದ ಆರ್‌ಸಿಬಿ

ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ಆರ್‌ಸಿಬಿಗೆ ಶುಭಹಾರೈಸಿದ್ದರು. ಆರ್‌ಸಿಬಿ ನಾಲ್ಕನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೇನೆ. ಪಂಜಾಜ್ ಗೆದ್ದರೆ ಅವರಿಗೂ ಅಭಿನಂದನೆ ಹೇಳುತ್ತೇನೆ ಎಂದಿದ್ದರು.

ಟ್ರೋಫಿಗಾಗಿ ನಡೆಯುತ್ತಿರುವ ಜಿದ್ದಾಜಿದ್ದಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿದ್ದಾರೆ. ಪಂಜಾಬ್‌ಗೆ 191 ರನ್‌ಗಳ ಗುರಿ ನೀಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಜೆರ್ಸಿ, ಪಂಜಾಬ್‌ ಪೇಟಾ ಧರಿಸಿದ ಕ್ರಿಸ್‌ ಗೇಲ್‌ – ವೈರಲ್‌ ಆಯ್ತು ಸ್ಪೆಷಲ್‌ ಲುಕ್‌

ಫಿಲ್‌ ಸಾಲ್ಟ್‌ 16, ವಿರಾಟ್‌ ಕೊಹ್ಲಿ 43, ಮಯಾಂಕ್‌ ಅಗರ್ವಾಲ್‌ 24, ರಜತ್‌ ಪಾಟೀದಾರ್‌ 26, ಲಿಯಾಮ್‌ ಲಿವಿಂಗ್‌ಸ್ಟೋನ್‌ 25, ಜಿತೇಶ್‌ ಶರ್ಮಾ 24, ರೊಮಾರಿಯೋ ಶೆಫರ್ಡ್‌ 17 ರನ್‌ ಗಳಿಸಿದ್ದಾರೆ.

Share This Article