ಇನ್ಮುಂದೆ ವಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರಲ್ಲ: ಸಿಎಂ ಕೆಂಡ

Public TV
1 Min Read

ಮೈಸೂರು: ನಾನು ಈಗ ಮೊದಲಿನ ಸಿದ್ದರಾಮಯ್ಯ (CM Siddaramaiah) ಅಲ್ಲ, ನಾನು ಬದಲಾಗುತ್ತೇನೆ. ಇನ್ಮುಂದೆ ವಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಬಗ್ಗೆ ಹೋಗ್ಲಿ ಬಿಡು, ಹೋಗ್ಲಿ ಬಿಡು ಅಂತ ನಾನು ಅಂತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. ವಿಪಕ್ಷಗಳ ಎಲ್ಲಾ ನಾಯಕರ ಹಳೇ ಕಥೆ ಓಪನ್ ಮಾಡ್ತೀನಿ. ದ್ವೇಷದ ರಾಜಕಾರಣ ಅಂದರೂ ಪರವಾಗಿಲ್ಲ. ನಾನು ಇನ್ಮುಂದೆ ಡೋಂಟ್ ಕೇರ್ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ತಪ್ಪೇ ಮಾಡದ ನನ್ನ ಮೇಲೆ ಬೀದಿ ಬೀದಿ ಸುತ್ತಿಕೊಂಡು ಸುಳ್ಳು ಹಬ್ಬಿಸಿ ನನ್ನ ಹೆಸರು ಕೆಡಿಸುತ್ತಿದ್ದಾರೆ. ಈ ವಿಚಾರದಲ್ಲಿ ನಾನಿನ್ನು ತಾಳ್ಮೆಯಾಗಿರಲ್ಲ. ಯಾರೇ ಬಂದು ಏನೇ ಒತ್ತಡ ಹೇರಿದರೂ ನಾನು ಇನ್ಮೇಲೆ ವಿಪಕ್ಷಗಳ ವಿಚಾರದಲ್ಲಿ ತಾಳ್ಮೆಯಾಗಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.

Share This Article