ಏ.2ಕ್ಕೆ ಸಿಎಂ ಡೆಲ್ಲಿಗೆ – ಹನಿಟ್ರ‍್ಯಾಪ್ ಬಗ್ಗೆ ಮಾಹಿತಿ ಕೊಡ್ತಾರಾ ಸಿದ್ದರಾಮಯ್ಯ?

Public TV
1 Min Read

ಬೆಂಗಳೂರು: ಎರಡೂವರೆ ತಿಂಗಳ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ (High Command) ಭೇಟಿಯಾಗಿ ಹನಿಟ್ರ‍್ಯಾಪ್ (Honey Trap) ಬಗ್ಗೆ ಮಾಹಿತಿ ಕೊಡ್ತಾರಾ ಎನ್ನುವ ಕೂತುಹಲ ಸೃಷ್ಟಿಯಾಗಿದೆ.

ಹನಿಟ್ರ‍್ಯಾಪ್ ರಾಜಕೀಯ ಬಿಸಿಯ ನಡುವೆಯೇ ಸಿಎಂ ಡೆಲ್ಲಿ (Delhi) ಭೇಟಿ ಕುತೂಹಲ ಮೂಡಿಸಿದ್ದು, ಏ.2ರಂದು ಡೆಲ್ಲಿಗೆ ತೆರಳಲಿದ್ದಾರೆ. ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಬಗ್ಗೆ ಸಿಎಂ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಹನಿಟ್ರ‍್ಯಾಪ್ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

ಇನ್ನೂ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಚಿವರ ಸ್ನೇಹ ಆರೋಪದ ಬಗ್ಗೆಯೂ ಮಾಹಿತಿ ಕೊಡುವ ಸಾಧ್ಯತೆಯಿದೆ. ಇನ್ನೂ ಇದೇ ಮೇನಲ್ಲಿ ಸರ್ಕಾರಕ್ಕೆ ಎರಡು ವರ್ಷ ತುಂಬಲಿದ್ದು, ಸರ್ಕಾರ ಮತ್ತು ಪಕ್ಷದಿಂದ ಸಾಧನಾ ಸಮಾವೇಶ ನಡೆಸಲು ಅನುಮತಿ ಕೇಳಲಿದ್ದಾರೆ.

ಇನ್ನುಳಿದಂತೆ ಪವರ್ ಶೇರ್, ಸಂಪುಟ ಪುನರಚನೆ ವಿಚಾರವಾಗಿಯೂ ಸೂಕ್ಷ್ಮವಾಗಿ ಮಾಹಿತಿ ಪಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.ಇದನ್ನೂ ಓದಿ: ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

Share This Article