ಬಸವಣ್ಣನ ವಚನದ ಮೂಲಕ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಸಿಎಂ ತಿರುಗೇಟು

Public TV
1 Min Read

ಬೆಂಗಳೂರು: ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಸಂಸ್ಕøತಿ ಇಲ್ಲದ ಬಿಜೆಪಿ. ಬಿಜೆಪಿ ನಾಯಕರ ಭಾಷೆ ಅವರ ಸಂಸ್ಕøತಿಯನ್ನು ತೋರಿಸುತ್ತದೆ. ನಾನು ಅವರ ಲೆವೆಲ್‍ಗೆ ಇಳಿದು ಮಾತನಾಡುವುದಿಲ್ಲ. ಬಸವಣ್ಣ ಅವರ ವಚನವನ್ನು ಹೇಳಲಷ್ಟೆ ಸಾಧ್ಯ ಎಂದು ಬಸವಣ್ಣನ ವಚನದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ


ಇತ್ತೀಚೆಗೆ ಬಂಟ್ವಾಳದ ಬಿಸಿರೋಡ್‍ನಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ ಅಂತಾ ಟೀಕಿಸಿದ್ದರು. ಅಲ್ಲದೇ ಭಯೋತ್ಪಾದಕ ಅನ್ನೋ ಶಬ್ದಕ್ಕೆ ವಿವರಣೆಯನ್ನೂ ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಜನತೆಯಲ್ಲಿ ಭಯ ಉತ್ಪಾದಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹೀಗಾಗಿಯೇ ಸಿಎಂ ಸಿದ್ದರಾಮಯ್ಯನವರು ಭಯೋತ್ಪಾದಕ. ಮಾತ್ರವಲ್ಲ ತಲ್ವಾರ್ ಹಿಡಿದವರಿಗೆ ಸಿಎಂ ಬೆಂಬಲವನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿರುವ ಮೂರು ಮಾರಿಗಳನ್ನು ಓಡಿಸಲು ಜನಸುರಕ್ಷಾ ಯಾತ್ರೆ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ರಮಾನಾಥ್ ರೈ ಎಂಬ ಮಾರಿಗಳನ್ನು ಕೇರಳಕ್ಕೆ ಓಡಿಸಲಾಗುತ್ತದೆ. ಮೂರು ತಿಂಗಳಲ್ಲಿ ಕಾಂಗ್ರೆಸ್‍ನ ಅಂತ್ಯಸಂಸ್ಕಾರವೂ ನೇರವೇರುತ್ತೆ ಅಂತಾ ಕಟೀಲ್ ಹೇಳಿಕೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *