ಇಡಿ ನೋಟಿಸ್‌ನಿಂದ ಸಿಎಂಗೆ ಆಘಾತ, ಡಿಕೆಶಿಗೆ ಸಂತಸ – ವಿಜಯೇಂದ್ರ

Public TV
1 Min Read

-ರಾಜ್ಯಾಧ್ಯಕ್ಷ ಚುನಾವಣೆ; ಎಲ್ಲದಕ್ಕೂ ಸಿದ್ಧ ಎಂದ ಶಾಸಕ

ಬೆಂಗಳೂರು: ಇಡಿ ನೋಟಿಸ್ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ದೊಡ್ಡ ಹಿನ್ನಡೆಯಾಗಿದೆ, ಆದರೆ ಡಿಕೆ ಶಿವಕುಮಾರ್‌ಗೆ (DK Shivakumar) ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಅವರು, ಲೋಕಾಯುಕ್ತದಿಂದ `ಬಿ’ ರಿಪೋರ್ಟ್ ತೆಗೆದುಕೊಂಡು ಬರುವ ಲೆಕ್ಕಾಚಾರದಲ್ಲಿ ಸಿಎಂ ಇರುವಾಗ ಇಡಿಯಿಂದ ನೋಟಿಸ್ ಕೊಡಲಾಗಿದೆ. ಅವರ ಧರ್ಮಪತ್ನಿಯವರಿಗೆ ಹಾಗೂ ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಕೊಡಲಾಗಿದೆ. ಇವರಿಬ್ಬರು ತನಿಖೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇಡಿ ನೋಟಿಸ್ ಸಿದ್ದರಾಮಯ್ಯರಿಗೆ ದೊಡ್ಡ ಆಘಾತ ತಂದಿದೆ. ಮುಡಾ ಅಕ್ರಮದ ಪರಿಣಾಮವನ್ನು ಸಿಎಂ ಎದುರಿಸಲೇಬೇಕು ಎಂದರು.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ – ಡಿಸಿ, ಎಸ್ಪಿಗಳಿಗೆ ಕೃಷ್ಣಬೈರೇಗೌಡ ಸೂಚನೆ

ಇನ್ನೂ ಇಡಿ ನೋಟಿಸ್ ಕೊಟ್ಟಿರೋದು ಡಿಕೆಶಿಗೆ ಒಳಗೊಳಗೇ ಸಂತೋಷ ತಂದಿರುತ್ತದೆ. ಇದರಲ್ಲಿ ಅಚ್ಚರಿ ಏನಿಲ್ಲ. ನಾನು ಡಿಕೆಶಿ ಅವರ ಹೇಳಿಕೆಯನ್ನು ಗಮನಿಸಿದೆ. ಡಿಕೆಶಿ ಮುಖದಲ್ಲಿ ಮಂದಹಾಸ ಕಾಣ್ತಿತ್ತು. ಅಬ್ಬಾ, ಸಿಎಂಗೆ ನೋಟಿಸ್ ಕೊಟ್ರಲ್ಲ ಅನ್ನುವ ಮಂದಹಾಸ ಡಿಕೆಶಿ ಮುಖದಲ್ಲಿತ್ತು ಎಂದು ಲೇವಡಿ ಮಾಡಿದರು.

ಇದೇ ವೇಳೆ ಸ್ಪರ್ಧೆ ಖಚಿತ, ಜಯ ನಿಶ್ಚಿತ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ. ರಾಜ್ಯಾಧ್ಯಕ್ಷ ಚುನಾವಣೆಯನ್ನು ಯಾವ ರೀತಿ ನಡೆಸಬೇಕು ಎಂದು ಹೈಕಮಾಂಡ್‌ನವರು ಗಮನಿಸ್ತಾರೆ. ಆದರೆ ನಾನು ಕೂಡಾ ಎಲ್ಲದಕ್ಕೂ ಸಿದ್ಧವಾಗಿಯೇ ಇದ್ದೇನೆ. ಒಳ್ಳೆಯದಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದು ಹೇಳಿದರು.ಇದನ್ನೂ ಓದಿ: ಕಾದುನೋಡಿ.. ಸುದೀಪ್‌ ಸರ್‌ ಇಲ್ಲದೇ ‘ಬಿಗ್‌ ಬಾಸ್‌’ ಇಲ್ಲ: ಶೋ ನಿರ್ದೇಶಕ ಪ್ರಕಾಶ್‌

 

Share This Article