ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದ ಸಿಎಂ- ವಿಡಿಯೋ ನೋಡಿ

Public TV
1 Min Read

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಮಳವಳ್ಳಿ ಪಟ್ಟಣದಲ್ಲಿ ತಮ್ಮ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ನರೇಂದ್ರಮೋದಿಗೆ ವೋಟ್ ಹಾಕಿ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಜನ ಜೋರಾಗಿ ಕಿರುಚಿದಾಗ ಸಿಎಂಗೆ ಎಡವಟ್ಟಾದ ವಿಚಾರ ಗೊತ್ತಾಗಿದೆ. ನಂತರ ನಂತರ ನರೇಂದ್ರ ಸ್ವಾಮಿಗೆ ಮತ ನೀಡಿ ಎಂದು ಹೇಳಿದ್ದಾರೆ.

ಭಾಷಣದುದ್ದಕ್ಕೂ ನಾಲ್ಕು ಬಾರಿ ನರೇಂದ್ರಸ್ವಾಮಿ ಎನ್ನುವ ಬದಲು ನರೇಂದ್ರ ಮೋದಿ ಎಂದಿದ್ದಾರೆ. ನರೇಂದ್ರ ಎನ್ನುವುದು ಮುಖ್ಯವಾಗಿದೆ. ನರೇಂದ್ರ ಮೋದಿ ನಿತ್ಯ, ನರೇಂದ್ರ ಸ್ವಾಮಿ ಸತ್ಯ. ಮೊದಲು ನರೇಂದ್ರ ಮೋದಿಗೆ ನೀಡುವ ವೋಟ್ ನನಗೆ ನೀಡಿದಂತೆ ಎಂದು ಹೇಳಿದ್ದಾರೆ. ನಂತರ ಮತದಾರರು ಘೋಷಣೆ ಹಾಕಿದ್ದಾರೆ. ಬಳಿಕ ನರೇಂದ್ರ ಸ್ವಾಮಿಗೆ ವೋಟ್ ಮಾಡಿದರೆ ಸಿದ್ದರಾಮಯ್ಯಗೆ ವೋಟ್ ಮಾಡಿದಂತೆ ಎಂದು ಹೇಳಿ ಎಡವಟ್ಟನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.

ಇದೇ ವೇಳೆ ಮಳವಳ್ಳಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾನು ಹೋದ ಕಡೆಗಳಲ್ಲಿ, ಉಳಿದುಕೊಂಡ ಕಡೆಗಳಲ್ಲಿ ದಾಳಿ ಮಾಡಲಿ. ಬಿಜೆಪಿ ಅವರು ಅದೇ ಕೆಲಸ ಮಾಡಲಿ. ಅವರಿಗೆ ಇನ್ನೇನು ಕೆಲಸ ಇದೆ. ಪ್ರಧಾನಿ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಉಳಿದುಕೊಂಡಿದ್ದ ಮನೆ, ಹೋಟೆಲ್ ರೇಡ್ ಮಾಡಿದ್ದಾರಾ?. ಆದಾಯ ತೆರಿಗೆ ಇಲಾಖೆಯವರು ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡುತ್ತಿದ್ದಾರೆ ಎಂದ್ರು.

ಕಾಂಗ್ರಸ್ ನವರನ್ನ ಎದುರಿಸಲು, ಭಯದ ವಾತಾವರಣ ನಿರ್ಮಿಸಲು ಈ ರೀತಿ ಮಾಡುತ್ತಿದ್ದಾರೆ. ನಾನು 12 ಚುನಾವಣೆ ಮಾಡಿದ್ದೇನೆ ಆದರೆ ಚುನಾವಣೆ ವೇಳೆಯಲ್ಲೇ ಐಟಿ ದಾಳಿ ಮಾಡುತ್ತಿರುವುದನ್ನ ನಾನೆಂದು ಕಂಡಿಲ್ಲ. ಇದೇ ಮೊದಲ ಬಾರಿಗೆ ನಡೆದಿದೆ ಎಂದು ಹೇಳಿ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *