ಗಂಡಸರಿಗೂ ಫ್ರೀ ಬಸ್‌ ಕೊಟ್ರೆ KSRTC ಮುಚ್ಚಬೇಕಾಗುತ್ತೆ: ಸಿದ್ದರಾಮಯ್ಯ

Public TV
2 Min Read

ಚಾಮರಾಜನಗರ: ಗಂಡಸರಿಗೂ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ (KSRTC) ಮುಚ್ಚಬೇಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರಲ್ಲಿ ಶನಿವಾರ ಸಂಜೆ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಮಹಿಳೆಯರಿಗೆ ಫ್ರೀ ಬಸ್‌ ವ್ಯವಸ್ಥೆ ಕುರಿತು ಮಾತನಾಡುವ ವೇಳೆ, ಗಂಡಸರಿಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಗಂಡಸರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ರೆ KSRTC ಮುಚ್ಚಬೇಕಾಗುತ್ತೆ ಎಂದಿದ್ದಾರೆ.

ನಂತರ ಕಾರ್ಯಕ್ರಮದ ಕುರಿತು ಮಾತನಾಡಿ, ಸರ್ಕಾರಿ ವೈದ್ಯರು ರೋಗಿಗಳ ಬಳಿ ಚೆನ್ನಾಗಿ ಮಾತನಾಡಿದರೇ ಅರ್ಧ ರೋಗ ಕಡಿಮೆಯಾಗತ್ತೆ. ನಮ್ಮ ವೈದ್ಯರು ಬಹಳಷ್ಟು ಮಂದಿ ಸರಿಯಾಗಿ ಮಾತನಾಡಿಸುವುದಿಲ್ಲ, ಇನ್ಮೇಲಾದರೂ ರೋಗಿಗಳ ಜೊತೆ ವೈದ್ಯರು ಚೆನ್ನಾಗಿ ಮಾತನಾಡಿಸಿ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಶಾಸಕರ ವಿರುದ್ಧ ಕ್ರಮದ ಅಧಿಕಾರ: ಸಿ.ಟಿ ರವಿ

ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕು, ತುರ್ತು ಚಿಕಿತ್ಸೆ ಕೊಡಿ, ರೋಗಿಗಳಿಂದ ವೈದ್ಯರು ಏನನ್ನೂ ನಿರೀಕ್ಷೆ ಮಾಡಬೇಡಿ, ಗೋಲ್ಡನ್ ಹವರ್‌ನಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು‌. ಇದೇ ವೇಳೆ ಪ್ರತಿ ಜಿಲ್ಲೆಯಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಯೋಚಿಸಿದ್ದೇನೆ, ಪ್ರತಿ ಜಿಲ್ಲಾಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಗ್ಗೆ ಸರ್ಕಾರದ ಗಂಭೀರ ಚಿಂತನೆ ನಡೆಸಿದೆ ಎಂದರು. ಇದನ್ನೂ ಓದಿ: ಇಷ್ಟು ಕಾಲ ಸಹಿಸಿದ್ದೇವೆ, ಇನ್ಮುಂದೆ ಸಹಿಸಲು ಆಗಲ್ಲ: ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ

ನಾನು ಚಿಕ್ಕವನಿದ್ದಾಗ ಜ್ವರ ಬಂದರೆ ಚಿಕನ್ ಬಿರಿಯಾನಿ, ಮಟನ್ ಫ್ರೈ ತಿನ್ನುತ್ತಿದೆ, ಈಗ ಜ್ವರ ಬಂದಾಗ ಬಿರಿಯಾನಿ ತಿಂದ್ರೆ ಜ್ವರ ಜಾಸ್ತಿ ಆಗುತ್ತೆ. ಆಗ ಹಳ್ಳಿ ಜನರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತಿತ್ತು. ಈಗ ಕಡಿಮೆಯಾಗಿದೆ, ಜನರನ್ನು ಕೇಳಿದರೇ ಸಕ್ಕರೆ, ಬಿಪಿ ಇದೆ ಎನ್ನುತ್ತಾರೆ. ಬಹಳಷ್ಟು ಮಂದಿ ವ್ಯಾಯಾಮ ಮಾಡುತ್ತಿಲ್ಲ, ಹೊಲ ಉಳುವ ಜಾಗಕ್ಕೆ ಟ್ರ್ಯಾಕ್ಟರ್‌, ಟಿಲ್ಲರ್ ಬಂದಿದೆ. ವಿಜ್ಞಾನ ಬೆಳೆದಷ್ಟೂ ಹೊಸ ರೋಗಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ವಿಜಯೇಂದ್ರರನ್ನ ಪಕ್ಷದ ಅಧ್ಯಕ್ಷರಾಗಿ ಮಾಡಿರೋದು ಹೈಕಮಾಂಡ್‌ಗೆ ಔಚಿತ್ಯ: ರಾಧಾ ಮೋಹನದಾಸ್

Share This Article