ಬಿಜೆಪಿ, ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತ ವಿರೋಧಿಗಳು – ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿಎಂ ಆಕ್ಷೇಪ

Public TV
1 Min Read

ಬೆಂಗಳೂರು: ಬಿಜೆಪಿಯವರು, ಎನ್‌ಡಿಎ ಸರ್ಕಾರ (NDA Government) ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaia) ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಎಸ್‌. ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರೋ ನಿಜಲಿಂಗಪ್ಪ ಪ್ರತಿಮೆಗೆ ಸಿಎಂ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್‌ನಲ್ಲಿ ಕೇಂದ್ರದಿಂದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ (Waqf Act Bill) ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮುಂದೊಂದು ದಿನ ಮೋದಿ ನಿವಾಸಕ್ಕೆ ಜನ ನುಗ್ಗುತ್ತಾರೆ: ನಾಲಗೆ ಹರಿಬಿಟ್ಟ ಕೈ ಹಿರಿಯ ನಾಯಕ

ಬಿಜೆಪಿಯವರು, ಎನ್‌ಡಿಎ ಸರ್ಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು. ಎನ್‌ಡಿಎ ಸರ್ಕಾರ ಜಾತ್ಯಾತೀತ ಸರ್ಕಾರ ಅಲ್ಲ. ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ. ಎನ್‌ಡಿಎ ಕೂಟ ಕಮ್ಯುನಲ್ ಪಾರ್ಟಿಗಳು, ಫ್ಯಾಸಿಸ್ಟ್ ಮನಸ್ಥಿತಿ ಇರೋರು ಎಂದು ವಾಗ್ದಾಳಿ ನಡೆಸಿದರು. ಶುಕ್ರವಾರ (ಆ.9) ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲ ಮಾತಾಡ್ತೀನಿ ಎಂದರು. ಇದನ್ನೂ ಓದಿ: ದೇಶದ ಅತ್ಯದ್ಭುತ ʻನಾಗʼತಾಣಗಳ ಬಗ್ಗೆ ನಿಮಗೆ ಗೊತ್ತೇ? ಇಲ್ಲಿ ನಂಬಿಕೆ ಸುಳ್ಳಾಗಿಲ್ಲ ಅಂತಾರೆ ಭಕ್ತರು!

ಇದೇ ವೇಳೆ ಬಿ.ಕೆ ಹರಿಪ್ರಸಾದ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ನಮ್ಮ ಪಕ್ಷದ ನಾಯಕರು. ಅವರು ಭೇಟಿಯಾಗೋದ್ರಲ್ಲಿ ಯಾವುದೇ ವಿಶೇಷ ಇಲ್ಲ. ಬುಧವಾರ 1 ಗಂಟೆಗಳ ಕಾಲ ಮಾತುಕತೆ ನಡೆಸಿದರು. ತುಂಬಾ ದಿನಗಳಿಂದ ಅವರು ಭೇಟಿಯಾಗಿರಲಿಲ್ಲ. ಹೀಗಾಗಿ ನಿನ್ನೆ ಭೇಟಿಯಾಗಿ ಮಾತಾಡಿದ್ದಾರೆ. ಉಭಯ ಕುಶಲೋಪರಿ ಮಾತಾಡಿದ್ದೇವೆ ಅಷ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ 

Share This Article