ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು- ಎಮರ್ಜೆನ್ಸಿ ನೆನಪು ಮೆಲುಕು ಹಾಕಿದ ಸಿಎಂ

Public TV
0 Min Read

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಮೈಸೂರಿನಲ್ಲಿ ತಮ್ಮ ಹಳೆಯ ಹೋರಾಟದ ದಿನಗಳನ್ನು ಮೆಲುಕು ಹಾಕಿಕೊಂಡರು.

ಪುಸ್ತಕ ಲೋಕಾರ್ಪಣೆ ಕಾಯಕ್ರಮದಲ್ಲಿ ಹಳೆಯ ದಿನಗಳ ಬಗ್ಗೆ ಮಾತನಾಡುತ್ತಾ, ತುರ್ತು ಪರಿಸ್ಥಿತಿ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ಮಾಡಿದ್ದೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ನನ್ನ ಧರಧರನೆ ಎಳೆದೊಯ್ದು ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದ ಎಂದರು.

ನಾನು ಜೈಲಿಗೆ ಹೋಗಬೇಕು ಅಂತಾ ವೀರ ವೇಷದಿಂದ ಹೋರಾಟಕ್ಕೆ ಹೋಗಿದ್ದೆ. ಈ ಗಿರಾಕಿಗಳು ನನ್ನ ಬೆಳಗ್ಗೆಯೆ ಪೊಲೀಸ್ ಠಾಣೆಯಿಂದ ಬಿಟ್ಟು ಕಳಿಸಿ ಬಿಟ್ಟರು ಎಂದು ಸಿಎಂ ಹೇಳಿದರು.  ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರ್ತಾರಾ ಜನಾರ್ದನ ರೆಡ್ಡಿ?

Share This Article