ಹುಬ್ಬಳ್ಳಿಯಲ್ಲಿ ʻಕಾಟೇರʼ ಟ್ರೈಲರ್ ರಿಲೀಸ್‌ – ಡಿ-ಬಾಸ್‌ ಮಾಸ್‌ ಲುಕ್‌ಗೆ ಅಭಿಮಾನಿಗಳು ಫಿದಾ

Public TV
2 Min Read

– ಟ್ರೈಲರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದ ಸಿಎಂ

ಹುಬ್ಬಳ್ಳಿ: ಇದೇ ಡಿಸೆಂಬರ್‌ 29 ರಂದು ತೆರೆಗೆ ಬರಲು ಸಜ್ಜಾಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮಾಲಾಶ್ರೀ ಪುತ್ರಿ ಆರಾಧನಾ ಜೊತೆಯಾಗಿ ನಟಿಸಿರುವ ʻಕಾಟೇರʼ ಚಿತ್ರದ ಟ್ರೈಲರ್‌ ಶನಿವಾರ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ.

ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಸಾಥ್ ನೀಡಿದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್ ಹೇಳಿದರು. ಇದನ್ನೂ ಓದಿ: ದರ್ಶನ್ ಕುರಿತು ನೆಗೆಟಿವ್ ಟ್ರೋಲ್: ಸಿಡಿದೆದ್ದ ಫ್ಯಾನ್ಸ್ 

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್‌ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.

ಅದ್ಧೂರಿ ಸಮಾರಂಭಕ್ಕೆ ಉತ್ತರ ಕರ್ನಾಟಕದ ಮೂಲೆಮೂಲೆಗಳಿಂದ ದರ್ಶನ್‌ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಮೈದಾನದಲ್ಲೆಡೆ ಡಿ ಬಾಸ್ ಘೋಷಣೆ ಮೊಳಗಿತು. ಇನ್ನೂ ನಾಡ ಬಾವುಟದ ಜೊತೆಗೆ ದರ್ಶ ಭಾವಚಿತ್ರದ ಪಟವೂ ರಾರಾಜಿಸಿದವು. ಇದನ್ನೂ ಓದಿ:  ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್‌

ಅಲ್ಲದೇ ಹಿರಿಯ ನಟರಾದ ವಿನೋದ್‌ ಆಳ್ವಾ, ವೈಜ್ಯನಾಥ್ ಬಿರಾದಾರ, ನಟಿ ಮಾಲಾಶ್ರೀ, ಯುವ ನಟರಾದ ಅಭಿಷೇಕ್‌ ಅಂಬರೀಶ್, ಧನ್ವೀರ್, ವಿನೋದ್‌ ಪ್ರಭಾಕರ್, ನಟಿ ಆರಾಧನಾ ಭಾಗವಹಿಸಿ ಅಭಿಮಾನಿಗಳಿಗೆ ರಸಧೌತಣ ನೀಡಿದರು. ಈ ವೇಳೆ ನಟಿ ಮಾಲಾಶ್ರೀ ಪುತ್ರಿ ಸಖತ್ ಸ್ಟೆಫ್ ಹಾಕಿ ರಂಜಿಸಿದರು.

Share This Article