ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ. ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಿದ್ದಾರೆ.
ಈ ಮೂಲಕ, ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು (D Devaraj Urs) ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿಯುತಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಗಲಭೆ| 2 ಬಾರಿ ಮರಣೋತ್ತರ ಪರೀಕ್ಷೆ ಯಾಕೆ? ಅನುಮತಿ ನೀಡಿದವರು ಯಾರು? – ಹೆಚ್‌ಡಿಕೆ
ಈ ಬಗ್ಗೆ ಮೈಸೂರಿನಲ್ಲಿ (Mysuru) ಮಾತಾಡಿದ ಸಿಎಂ, ನನಗೂ ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ ಇಬ್ಬರು ಒಂದೇ ಜಿಲ್ಲೆಯಿಂದ ಬಂದವರು. ಈ ರೆಕಾರ್ಡ್ ಮತ್ತೆ ಯಾರೂ ಮುರಿಯುವುದಿಲ್ಲ ಎಂದು ನಾನು ಹೇಳಲಾರೆ. ಏಕೆಂದ್ರೆ ಸಚಿನ್ ರೆಕಾರ್ಡ್‌ನ ಕೊಹ್ಲಿ ಮುರಿಯಲಿಲ್ವಾ..? ರೆಕಾರ್ಡ್ ವಿಚಾರ ಬಿಡಿ, ದಾಖಲೆ ವಿಚಾರ ಬಿಡಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸೇ ಕಂಡಿರಲಿಲ್ಲ ಎಂದರು.
ಮುಂದೆ ಇನ್ಯಾರೋ ದಾಖಲೆ ಮುರಿಯಬಹುದು, ನನಗಿಂತ ಹೆಚ್ಚಿನ ಬಜೆಟ್ ಮಂಡಿಸಬಹುದು. ದೇವರಾಜ ಅರಸು ಅವರ ಕಾಲದ ರಾಜಕಾರಣವೇ ಬೇರೆ. ಇವತ್ತಿನ ರಾಜಕಾರಣವೇ ಬೇರೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಕರ್ನಾಟಕ ಕಂಡ ದೀರ್ಘಾವಧಿ ಮುಖ್ಯಮಂತ್ರಿಗಳು
* ಸಿದ್ದರಾಮಯ್ಯ, ಮುಖ್ಯಮಂತ್ರಿ
ಜ.7ಕ್ಕೆ- 7 ವರ್ಷ, 240 ದಿನ
* ದೇವರಾಜ ಅರಸು, ಮಾಜಿ ಸಿಎಂ
7 ವರ್ಷ, 239 ದಿನ
* ರಾಮಕೃಷ್ಣ ಹೆಗಡೆ, ಮಾಜಿ ಸಿಎಂ
5 ವರ್ಷ, 216 ದಿನ
* ಎಸ್. ನಿಜಲಿಂಗಪ್ಪ, ಮಾಜಿ ಸಿಎಂ
7 ವರ್ಷ, 175 ದಿನ
* ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
5 ವರ್ಷ, 82 ದಿನ



