ಹಾಲಿನ ಪ್ಯಾಕೇಟ್‌ನಲ್ಲಿ ಹೆಚ್ಚಳ ಆಗಿರೋ 50ml ಹಾಲನ್ನು ಗ್ರಾಹಕರು ಖರೀದಿ ಮಾಡಲೇಬೇಕು: ಸಿಎಂ

Public TV
1 Min Read

ಬೆಂಗಳೂರು: ಹಾಲಿನ ದರ (Nandini Milk Price) ಹೆಚ್ಚಾಗಿಲ್ಲ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ  (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ 90 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಇತ್ತು. ಈ ವರ್ಷ 99 ಲಕ್ಷ ಲೀಟರ್ ಆಗಿದೆ. ಇದರಿಂದಾಗಿ ರೈತರಿಂದ ಹೆಚ್ಚುವರಿ ಹಾಲು ಬೇಡ ಎನ್ನಲು ಸಾಧ್ಯವಿಲ್ಲ. ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು. ಇದೇ ಕಾರಣಕ್ಕೆ ಅರ್ಧ ಲೀಟರ್ ಪ್ಯಾಕ್‍ನಲ್ಲಿ 50 ಎಂಎಲ್ ಹೆಚ್ಚಿಗೆ ಕೊಟ್ಟಿದ್ದೇವೆ. 50 ಎಂಎಲ್ ಹಾಲಿಗೆ 2 ರೂ. 10 ಪೈಸೆ ಆಗುತ್ತದೆ. ಅದಕ್ಕೆ 2 ರೂ. ಮಾಡಿದ್ದೇವೆ. ಇದು ಹೇಗೆ ಬೆಲೆ ಏರಿಕೆಯಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ- ಹಳೆಯ ಪ್ಯಾಕೆಟ್‌ಗೂ ಹೊಸ ಬೆಲೆ, ಗ್ರಾಹಕರ ಆಕ್ರೋಶ

ಬಿಜೆಪಿಯವರು ಹೇಳ್ತಾರೆ ಎಂದು ನೀವು, ಬೆಲೆ ಏರಿಕೆ ಆಗೋಯ್ತು ಎಂದು ಬರೆಯುತ್ತೀರಾ? ಹೊಟೇಲ್‍ನವರು ಕಾಫಿ, ಟೀ ಮಾಡೋರು ಬೆಲೆ ಹೆಚ್ಚಳ ಮಾಡಿದ್ದಾರಾ? ಕಾಫಿ, ಟೀ ಬೆಲೆ ಹೆಚ್ಚಳ ಮಾಡಲು ಆಗುವುದಿಲ್ಲ. ಹಾಲಿನ ದರ ಹೆಚ್ಚಾಗಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನೂ 550 ಎಂಎಲ್ ಹಾಲು ತೆಗೆದುಕೊಳ್ಳಲೇ ಬೇಕಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಇನ್ನೇನು ಚೆಲ್ಲಲು ಆಗತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ವಿಪಕ್ಷ ನಾಯಕರಾದ ವಿಚಾರಕ್ಕೆ, ವಕಿರ್ಂಗ್ ಕಮಿಟಿಯಲ್ಲಿ ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಬೇಕು ಎಂದು ಸಲಹೆ ನೀಡಿದ್ದೆ. ಕೇಂದ್ರ ಸರ್ಕಾರ ಹಾಗೂ ಮೋದಿಯನ್ನ ಎದುರಿಸಲು ನೀವೇ ಸರಿ ಎಂದು ಒತ್ತಾಯ ಮಾಡಿದ್ದೆ. ರಾಹುಲ್ ಗಾಂಧಿ ಜವಾಬ್ದಾರಿಯುತ ನಾಯಕ. ದೇಶದ ಹಿತ ದೃಷ್ಟಿಯಿಂದ ಬಹಳ ಒಳ್ಳೆಯ ಕೆಲಸ ಮಾಡ್ತಾರೆ. ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಮೂರು ಡಿಸಿಎಂ ಹುದ್ದೆ ವಿಚಾರವಾಗಿ, ಇದರಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

Share This Article