Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

Public TV
1 Min Read

ಮಂಡ್ಯ: 39 ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ 14 ಕೂಟದ ದೇವರುಗಳ ದೊಡ್ಡ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಭಾಗಿಯಾಗಲಿದ್ದಾರೆ.

ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಸೋಮವಾರದಿಂದ ಬೀರ ದೇವರುಗಳ ಜಾತ್ರಾ ಮಹೋತ್ಸವ ನಡೆಯುತ್ತಿದೆ. 14 ಕೂಟದ ದೇವರುಗಳ ಈ ಹಬ್ಬ 39 ವರ್ಷಗಳ ಬಳಿಕ ಜರುಗುತ್ತಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?

ಇಂದು ಬೆಳಗ್ಗೆ 11 ಗಂಟೆಗೆ ನಾಗಮಂಗಲದ ಹದ್ದಿಹಳ್ಳಿ ಹೆಲಿಪ್ಯಾಡ್‌ಗೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ದೊಡ್ಡಬಾಲ ಗ್ರಾಮಕ್ಕೆ ತೆರಳಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ, ಭೈರತಿ ಸುರೇಶ್ ಸಿಎಂಗೆ ಸಾಥ್ ನೀಡಲಿದ್ದಾರೆ.

Share This Article