ವರ್ಗಾವಣೆಗಾಗಿ ಅರ್ಜಿ ತಂದಿದ್ದ ವ್ಯಕ್ತಿ ವಿರುದ್ಧ ಸಿಎಂ ಗರಂ

By
1 Min Read

ಬೆಂಗಳೂರು: ವರ್ಗಾವಣೆಗಾಗಿ ಅರ್ಜಿ ತಂದಿದ್ದ ವ್ಯಕ್ತಿಯ ವಿರುದ್ಧ ಸಿಎಂ ಸಿದ್ದರಾಮಯ್ಯ (CM Siddaramaiah) ಆಕ್ರೋಶಗೊಂಡಿದ್ದು, ಕೃಷ್ಣದಲ್ಲಿರುವ ಗೃಹ ಕಚೇರಿಯಲ್ಲಿ ಕಿಡಿಕಾರಿದ್ದಾರೆ.ಇದನ್ನೂ ಓದಿ: 3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಕಾವೇರಿಯಿಂದ ಕೃಷ್ಣಗೆ ಶಿಕ್ಷಕರ ಸಂಘಟನೆ ಸಭೆಗೆ ಆಗಮಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು ಮೂಲದ ವ್ಯಕ್ತಿಯೋರ್ವ ವರ್ಗಾವಣೆ ಮಾಡಿಸಿಕೊಂಡುವಂತೆ ಮನವಿ ಮಾಡಿದ್ದಕ್ಕೆ ಗರಂ ಆಗಿದ್ದಾರೆ.

ಇದೇ ವೇಳೆ ಬರೀ ವರ್ಗಾವಣೆಗೆ ಬರುತ್ತೀರಾ? ಬೇರೆ ಕೆಲಸ ಇಲ್ಲವಾ ನಿಮಗೆ? ಎಂಎಲ್‌ಎಗಳಿರೋದು (MLA) ಬರೀ ವರ್ಗಾವಣೆ ಮಾಡೋ ಕಾರಣಕ್ಕೇನಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಆಕ್ರೋಶವನ್ನು ನೋಡಿ ಬೆಪ್ಪಾದ ವ್ಯಕ್ತಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಹಾಗೇ ಅಲ್ಲಿಂದ ಹೊರನಡೆದಿದ್ದಾರೆ.ಇದನ್ನೂ ಓದಿ: ಒಂದೇ ಒಂದು ಬಿಸ್ಕೆಟ್‌ ತಿನ್ನಲು ಹೋದ ಮಗು – ಮಿಷಿನ್‌ ಬೆಲ್ಟ್‌ಗೆ ಸಿಲುಕಿ ಸಾವು!

Share This Article