ನವದೆಹಲಿ: ದೆಹಲಿಯಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಶನಿವಾರ ಭೇಟಿಯಾಗಿದ್ದಾರೆ. ಇಂದು ಸಿಎಂ ಹಾಗೂ ಡಿಸಿಎಂ ಪ್ರತ್ಯೇಕ ಭೇಟಿಯು ಕುತೂಹಲ ಮೂಡಿಸಿದೆ.
ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಭೇಟಿಯಾಗಿ ಸಿಎಂ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ ಫಲಿತಾಂಶದಿಂದ ಕುಗ್ಗಿದ ಕಾಂಗ್ರೆಸ್ ಉತ್ಸಾಹ – ಕ್ರಾಂತಿ/ಪುನಾರಚನೆ ಜಪಕ್ಕೆ ತಾತ್ಕಾಲಿಕ ಬ್ರೇಕ್?
ಬಿಹಾರದ ಫಲಿತಾಂಶ ಹಾಗೂ ಕರ್ನಾಟಕದ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ನಾಯಕರು ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಪ್ರಸ್ತಾಪವನ್ನು ಸಿಎಂ ಇಟ್ಟಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ. ಡಿಸೆಂಬರ್‌ಗೂ ಮುನ್ನ ಸಂಪುಟ ಪುನಾರಚನೆಗೆ ಸಿಎಂ ಕ್ಲೈಮ್ ಮಾಡಿದ್ದಾರೆಂದು ತಿಳಿದುಬಂದಿದೆ.
ಬಿಹಾರದ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತೆಲಂಗಾಣದ ಸಿಎಂ ಜತೆ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಿ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೀವು ಗೆದ್ದಾಗ ಪ್ರಜಾಪ್ರಭುತ್ವ, ನಾವು ಗೆದ್ದಾಗ ಮತಗಳ್ಳತನವೇ? ರಾಹುಲ್ ಗಾಂಧಿ ಹಿಟ್ & ರನ್ ಟೀಂ: ಶೋಭಾ ಕರಂದ್ಲಾಜೆ
