ಲೀಲಾವತಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Public TV
1 Min Read

ಹಿರಿಯ ನಟಿ ಲೀಲಾವತಿ (Leelavathi) ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇದೀಗ ಅವರ ಆರೋಗ್ಯ (Health) ಯೋಗ ಕ್ಷೇಮ ವಿಚಾರಿಸಲು ಸಿಎಂ ಸಿದ್ದರಾಮಯ್ಯ (Cm Siddaramiah) ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದಾರೆ.

87 ವರ್ಷದ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಟ ದರ್ಶನ್, ಅಂಬರೀಶ್, ಗಿರಿಜಾ ಲೋಕೇಶ್ ಸೇರಿದಂತೆ ಅನೇಕರು ಆಗಮಿಸಿದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟ ಮನೆಗೆ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸ್ಥಾನ ಭದ್ರ ಮಾಡಿಕೊಂಡ ರಶ್ಮಿಕಾ ಮಂದಣ್ಣ

SIDDARAMAIHA SPOKE

ಈ ವೇಳೆ ಮಾಧ್ಯಮಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ನೆಲಮಂಗಲದಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದೆ ಹಾಗೆ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದೀನಿ. ಅವರು ಈಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ರೆ ಎಲ್ಲಾ ಖರ್ಚು ನಾನೇ ನೋಡಿಕೊಳ್ಳುತ್ತೇನೆ. ಲೀಲಾವತಿ ಅವರು ನೈಜ ಕಲಾವಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಬಳಿಕ ಫಾರೆಸ್ಟ್‌ನವರು ತೊಂದರೆ ಕೊಡುತ್ತಾರೆ ಈ ಭಾಗದವರು ಅಂತಿದ್ದರು ಈ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದರು.

ಅರಣ್ಯಾಧಿಕಾರಿಗಳಿಂದ ತೊಂದರೆಯಾಗಿದ್ದ ವಿಚಾರಕ್ಕೆ ವಿನೋದ್ ರಾಜ್ (Vinod Raj) ಪ್ರತಿಕ್ರಿಯಿಸಿ, ನಮ್ಮದು ಕಂದಾಯ ಭೂಮಿ ಎಂದು ಸೆಟಲ್ಮೆಂಟ್ ಆಗಿತ್ತು. ರೈತರನ್ನು ಅಲೆದಾಡಿಸೋದು ಆಗಬಾರದು. ಕೆಲವರು ರೈತರ ಜಾಗ ಭೂಕಬಳಿಕೆ ಮಾಡ್ತಿದ್ದಾರೆ. ಬಡವರನ್ನ ಕಣ್ಣೀರು ಹಾಕಿಸಬೇಡಿ ಎಂದು ಈ ವೇಳೆ ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಸಿಎಂ ಗಮನಕ್ಕೆ ತಂದಿರೋದಾಗಿ ವಿನೋದ್‌ ರಾಜ್ ತಿಳಿಸಿದ್ದಾರೆ. ತಾಯಿನ ಪ್ರೀತಿಯಿಂದ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ಹೇಳಿದ್ದಾರೆ.

Share This Article