ಡಿಸಿಎಂ ಬಳಿಕ ಸಚಿವರಿಗೆ ಈಗ ಸಿಎಂ ಡಿನ್ನರ್‌!

1 Min Read

ಬೆಂಗಳೂರು: ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಕಾವೇರಿ ನಿವಾಸದಲ್ಲಿ (Cauvery) ಸಚಿವರಿಗೆ ಡಿನ್ನರ್ (Dinner) ಆಯೋಜಿಸಿದ್ದಾರೆ.

ಡಿಸಿಎಂ ಡಿಕೆಶಿ ಡಿನ್ನರ್, ಸಂಪುಟ ಪುನಾರಚನೆಗೆ ಹೆಚ್ಚಾಗುತ್ತಿರುವ  ಒತ್ತಾಯ ಅಧಿವೇಶನ ನಡೆಯುತ್ತಿರುವಾಗ ಸಿಎಂ ಡಿನ್ನರ್ ಭಾರೀ ಕುತೂಹಲ ಮೂಡಿಸಿದೆ.

 

ಡಿನ್ನರ್‌ಗೆ ಹಿರಿಯ ಹಾಗೂ ಪ್ರಭಾವಿಯಾಗಿರುವ 16 ಸಚಿವರಿಗೆ ಆಮಂತ್ರಣ ನೀಡಲಾಗಿದೆ. ಈ ಡಿನ್ನರ್ ಸಭೆಯಲ್ಲಿ ಎರಡು ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಮಲತಾಯಿ ಧೋರಣೆ ಯಾಕೆ?- ಅಗತ್ಯ ಸಿಲಿಂಡರ್ ಪೂರೈಕೆ ಮಾಡಲಿ: ಕೇಂದ್ರದ ಕಡೆ ಬೊಟ್ಟ ಮಾಡಿದ ಸಿಎಂ 

ಡಿಸಿಎಂ ಡಿನ್ನರ್‌ ಬಳಿಕ ಸಿಎಂ ಡಿನ್ನರ್‌ ಆಯೋಜಿಸುವ ಮೂಲಕ ಯಾವ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಚರ್ಚೆ ಈಗ ಆರಂಭವಾಗಿದೆ. ಈ ಡಿನ್ನರ್ ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ.
Share This Article