– ಕಾಂಗ್ರೆಸ್‌ನಿಂದ ಹೊರ ಹಾಕ್ತಿರೋದು ಇದೇ ಮೊದಲೇನಲ್ಲ
– ಆಗೆಲ್ಲ ಹೆದರದ ನಾನು ಈಗ ಹೆದರ್ತೀನಾ? ಅಂದರಂತೆ ರಾಜಣ್ಣ
ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ನೋಡ್ತಾ ಇರಿ ಅಂತ ಕ್ರಾಂತಿ ಕಿಡಿ ಹಚ್ಚಿದ್ದ ಹಿರಿಯ ಕೈ ನಾಯಕ ಕೆ.ಎನ್ ರಾಜಣ್ಣಗೆ ಆಗಸ್ಟ್‌ನಲ್ಲೇ ಕೇಡುಗಾಲ ಬಂದಂತಾಗಿದೆ. ಹೈಕಮಾಂಡ್ ಕಟ್ಟಪ್ಪಣೆ ಮೇರೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಸಚಿವ ಸಂಪುಟದಿಂದ ರಾಜಣ್ಣರನ್ನ ವಜಾಗೊಳಿಸಿದ್ದಾರೆ. ಮಳೆಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ರಾಜಣ್ಣ (KN Rajanna) ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಆಪ್ತನ ತಲೆದಂಡವಾಗಿದ್ದಕ್ಕೆ ಸಿಎಂ ಮೌನಕ್ಕೆ ಶರಣಾಗಿದ್ದಾರೆ.
ವಿಧಾನಸಭೆ (Vidhan Sabha) ಕಲಾಪದ ವೇಳೆಯೂ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ವಿಧಾನಸೌಧದಿಂದ ಹೊರಡುವಾಗಲೂ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೇ ತೆರಳಿದ್ದಾರೆ. ಸದನದಲ್ಲೂ ರಾಜಣ್ಣ ವಜಾ ಬಗ್ಗೆ ಘೋಷಣೆ ಮಾಡದ ಸಿಎಂ, ಹೈಕಮಾಂಡ್ ಜೊತೆಗಿನ ಚರ್ಚೆ ಬಳಿಕ ನಾಳೆ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇತ್ತ ರಾಜಣ್ಣ ಕೂಡ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿಎಂ ನಿವಾಸಕ್ಕೆ ತರಳಿದ್ದಾರೆ. ಇದನ್ನೂ ಓದಿ: ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ಕಿಕ್‌ಔಟ್
ಕಾಂಗ್ರೆಸ್‌ನಿಂದ ಹೊರ ಹಾಕ್ತಿರೋದು ಇದೇ ಮೊದಲೇನಲ್ಲ
ವಿಧಾನಸೌಧದಿಂದ ತೆರಳೋದಕ್ಕೂ ಮುನ್ನ ಸಚಿವರ ಲಾಂಜ್‌ನಲ್ಲಿ ಆಪ್ತ ಶಾಸಕರ ಜೊತೆ ರಾಜಣ್ಣ ಚರ್ಚೆ ನಡೆಸಿ, ಸಲಹೆ ಪಡೆಯುತ್ತಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಕಾಂಗ್ರೆಸ್ ನಿಂದ ಹೊರ ಹಾಕ್ತಿರೋದು ಇದೇ ಮೊದಲೇನಲ್ಲ. 1984, 1994, 2004ರಲ್ಲೂ ಕಾಂಗ್ರೆಸ್ ನಿಂದ ಹೊರಗೆ ಹಾಕಿದ್ರು. ಆಗೆಲ್ಲ ಹೆದರದ ನಾನು ಈಗ ಹೆದರ್ತೀನಾ? ದೇವೇಗೌಡರನ್ನ ಸೋಲಿಸಿದಾಗಲೇ ನನ್ನನ್ನ ತೆಗೀಬೇಕಿತ್ತು ಅಂತ ಆಪ್ತರ ಬಳಿ ಹೇಳಿಕೊಂಡರು ಅಂತ ತಿಳಿದುಬಂದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದಲೇ ರಾಜಣ್ಣ ಉಚ್ಚಾಟನೆ? – ಆಪ್ತನನ್ನು ಉಳಿಸಲು ಸಿಎಂ ಕಸರತ್ತು
ಕೈಮುಗಿದು ಹೊರಟ ಡಿಕೆಶಿ
ಇನ್ನೂ ರಾಜಣ್ಣ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಡಿಕೆಶಿ ಕೈಮುಗಿದು ಒಳ ಹೋದರು. ಗಂಭೀರ ಚರ್ಚೆ ಬಳಿಕ ಸಂಪುಟದಿಂದ ರಾಜಣ್ಣರನ್ನು ವಜಾ ಮಾಡಲು ರಾಜಭವನಕ್ಕೆ ಸಿಎಂ ಶಿಫಾರಸು ಪತ್ರ ರವಾನಿಸಿದರು. ರಾಜಣ್ಣ ವಜಾ ಶಿಫಾರಸ್ಸಿನ ಸಂಬಂಧ ಸಿಎಂಗೆ ಕರೆ ಮಾಡಿ ರಾಜ್ಯಪಾಲ ಗೆಹ್ಲೋಟ್ ಮಾತುಕತೆ ನಡೆಸಿದರು. ಇವತ್ತೇ ಗೆಜೆಟ್ ಆಗಬೇಕಿದೆ ಅಂಗೀಕರಿಸಿ ಅಂತ ಸಿಎಂ ಮನವಿ ಮಾಡಿದರು. ರಾಜ್ಯಪಾಲರ ಸೂಚನೆ ಮೇರೆಗೆ ಅವರ ವಿಶೇಷ ಕಾರ್ಯದರ್ಶಿಗಳು ಆದೇಶ ಪ್ರಕಟಿಸಿದರು. ಸಿಎಂ ಕಚೇರಿಯಲ್ಲಿ ಸಿಎಂ ಪುತ್ರ ರಾಜಣ್ಣ ಭಾವುಕರಾದಾಗ ಪೊನ್ನಣ್ಣ ಸಮಾಧಾನ ಮಾಡಿದ್ದಾರೆ. ಬಳಿಕ ಆಡಳಿತ ಮೊಗಸಾಲೆಯಲ್ಲಿ ಸಪ್ಪಗೆ ಅಪ್ಪ-ಮಗ ಕೂತಿದ್ದರು. ಇದನ್ನೂ ಓದಿ: ಸದನದಲ್ಲೂ ರಾಜೀನಾಮೆ ವಿಚಾರಕ್ಕೆ ಜೋರು ಜಟಾಪಟಿ – ಉತ್ತರ ಕೊಡದೇ ಜಾರಿಕೊಂಡ ರಾಜಣ್ಣ