ರಾಜಣ್ಣ ಅಲರ್ಟ್, ಸಿದ್ದರಾಮಯ್ಯ ದಿಢೀರ್ ಭೇಟಿ: ಹೈಕಮಾಂಡ್ ಮುಂದೆ ಮರುಸೇರ್ಪಡೆಗೆ ಬ್ಯಾಟಿಂಗ್ ಮಾಡ್ತಾರಾ ಸಿಎಂ?

Public TV
1 Min Read

ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಅಲರ್ಟ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮತ್ತೆ ಮಂತ್ರಿ ಸ್ಥಾನಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಸಿಎಂ ದೆಹಲಿಗೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ರು ಎನ್ನಲಾಗಿದೆ.

ವರಿಷ್ಠರ ಜೊತೆ ಮಾತಾಡುವಂತೆ ಸಿದ್ದರಾಮಯ್ಯ ಮುಂದೆ ಪ್ರಸ್ತಾಪಿಸಿದ್ದಾರಂತೆ. ಸಂಪುಟ ಪುನಾರಚನೆ ಆಗಲಿ, ಆಗದಿರಲಿ.. ರಾಜಣ್ಣ ಸೇರ್ಪಡೆಗೆ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ. ಸಂಪುಟ ಪುನಾರಚನೆಯಾದರೂ ರಾಜಣ್ಣ ಮರುಸೇರ್ಪಡೆಗೆ ಪರಿಗಣಿಸಬೇಕು. ಇಲ್ಲ ವಿಸ್ತರಣೆಯಾದ್ರೂ ಮಾಡಿ ರಾಜಣ್ಣ ಸೇರ್ಪಡೆ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ವೋಟ್ ಚೋರಿ ಅಭಿಯಾನದ ಬಗ್ಗೆ ಅಪಸ್ವರ ಎತ್ತಿದ್ರು ಅಂತೇಳಿ ರಾಜಣ್ಣ ಅವರನ್ನ ಸಂಪುಟದಿಂದ ವಜಾಗೊಳಿಸಲಾಗಿತ್ತು. ಹಾಗಾಗಿ, ನಾಗೇಂದ್ರ ರಾಜೀನಾಮೆ, ರಾಜಣ್ಣ ವಜಾ ಸೇರಿ ಎರಡು ಸಚಿವ ಸ್ಥಾನ ಖಾಲಿಯಿದ್ದು, ಎಸ್‌ಟಿ ಸಮುದಾಯಕ್ಕೆ ಎರಡು ಸ್ಥಾನ ಕೊಡಬೇಕೆಂಬ ಒತ್ತಡ ಇದೆ. ಸಿಎಂ ಹೇಗೆ ಹೈಕಮಾಂಡ್ ಮುಂದೆ ಕ್ಲೈಮ್ ಮಾಡ್ತಾರೆ ಕಾದುನೋಡಬೇಕಿದೆ.

Share This Article