ಶಕ್ತಿ ಯೋಜನೆ ಉಲ್ಲೇಖಿಸಿ ಮೋದಿ ಸಿಡಿಸಿದ ಚಟಾಕಿಗೆ ನಕ್ಕಿದ ಸಿಎಂ, ಡಿಸಿಎಂ

By
1 Min Read

ಬೆಂಗಳೂರು: ಮಹಿಳೆಯರಿಗೆ  ನೀಡಿದ ಉಚಿತ ಪ್ರಯಾಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸಿಡಿಸಿದ ಹಾಸ್ಯ ಚಟಾಕಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ನಕ್ಕಿದ್ದಾರೆ.

ಪ್ರಧಾನಿ ಮೋದಿ ಅವರು ಅಲ್ಲಿದ್ದ ಮಹಿಳೆಯರಿಗೆ ನೀವು ಮೆಟ್ರೋದಲ್ಲಿ (Metro) ಹೋಗಲು ಇಷ್ಟ ಪಡುತ್ತಿರೋ? ಬಸ್ಸಿನಲ್ಲಿ ಹೋಗಲು ಇಷ್ಟ ಪಡುತ್ತೀರೋ ಎಂದು ಪ್ರಶ್ನಿಸಿದ್ದಾರೆ.  ಈ ವೇಳೆ ಮಹಿಳೆಯರು ನಾವು ಮೆಟ್ರೋದಲ್ಲಿ ಹೋಗಲು ಇಷ್ಟ ಪಡುತ್ತೇವೆ. ಮೆಟ್ರೋ ಪ್ರಯಾಣ ಉತ್ತಮ ಎಂದು ಉತ್ತರಿಸಿದ್ದಾರೆ.

ಈ ವಿಚಾರವನ್ನು ಮೋದಿ ಸಿಎಂ, ಡಿಸಿಎಂ ಕಡೆ ತಿರುಗಿ, ನೋಡಿ ಸಿದ್ದರಾಮಯ್ಯನವರೇ ನೀವು ಮಹಿಳೆಯರಿಗೆ ಫ್ರೀ ಬಸ್ ಮಾಡಿದ್ರೂ ಅವ್ರು ಬಸ್ ಇಷ್ಟ ಪಡುತ್ತಿಲ್ಲ. ಮೆಟ್ರೋ ಇಷ್ಟ ಅಂತೆ ಎಂದು ಹೇಳಿದರು.  ಇದನ್ನೂ ಓದಿ: ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

 

ಪ್ರಧಾನಿ ಮೋದಿ ಅವರ ಸಂದರ್ಭೋಚಿತ ಹಾಸ್ಯ ಚಟಾಕಿಗೆ ಅಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಫ್ರೀ ಬಸ್ ಉಲ್ಲೇಖಿಸಿ ಮೆಟ್ರೋದಲ್ಲಿ ಮೋದಿಯವರಿಂದ ಸಿಎಂ ಡಿಸಿಎಂಗೆ ಹಾಸ್ಯದ ಮೂಲಕ ಟಾಂಗ್ ನೀಡಿದ್ದಾರೆ.

ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ವಂದೇ ಭಾರತ್‌ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಮೆಟ್ರೋ ಉದ್ಘಾಟನೆ ಮಾಡಲು ರಾಗಿಗುಡ್ಡಕ್ಕೆ ಬಂದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ರಾಜ್ಯದ ಪಾಲೇ ಹೆಚ್ಚು ಮೋದಿ ಎದುರೇ ಸಿದ್ದರಾಮಯ್ಯ ‘ಕ್ರೆಡಿಟ್‌’ ಕ್ಲೈಮ್

ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಪ್ರಧಾನಿ, ಸಿಎಂ, ಡಿಸಿಎಂ ಮೆಟ್ರೋ ರೈಲಿನಲ್ಲಿ ಜೊತೆಯಾಗಿ ಕುಳಿತು ಕೋನಪ್ಪನ ಅಗ್ರಹಾರದವರೆಗೆ (ಇನ್ಫೋಸಿಸ್ ಫೌಂಡೇಶನ್ ಮೆಟ್ರೋ ಸ್ಟೇಷನ್) ಪ್ರಯಾಣಿಸಿದರು. ಈ ಪ್ರಯಾಣದ ವೇಳೆ ಎದುರುಗಡೆ ಬಿಜೆಪಿ ಸಂಸದರು ಕುಳಿತಿದ್ದರು.

Share This Article