ಕನ್ನಡ ಹೋರಾಟಗಾರರ ಮೇಲಿನ ಎಲ್ಲಾ ಕೇಸ್ ವಾಪಸ್ – ಸಿಎಂ ಘೋಷಣೆ

Public TV
2 Min Read

– ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣಕ್ಕೆ ಕರೆ

ಬೆಂಗಳೂರು: ಕನ್ನಡ ಹೋರಾಟಗಾರರ ( Pro Kannada Activists) ಮೇಲಿನ ಎಲ್ಲಾ ಕೇಸ್‍ಗಳನ್ನ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ  (Siddaramaiah) ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ 25 ಅಡಿ ಕಂಚಿನ ಕನ್ನಡ ತಾಯಿ ಭುವನೇಶ್ವರಿ ದೇವಿಯ (Bhuvaneshwari Devi) ಪ್ರತಿಮೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಈ ವೇಳೆ, ಕನ್ನಡ ಹೋರಾಟಗಾರರ ಮೇಲೆ ಕೇಸ್ ಇದ್ದವರು ಲೆಟರ್ ಕೊಡಿ. ಕ್ಯಾಬಿನೆಟ್‍ನಲ್ಲಿ ಇಟ್ಟು ಅದನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮ್ಮ ಸರ್ಕಾರದಿಂದ ಕನ್ನಡಕ್ಕೆ ಅಗ್ರ ಸ್ಥಾನ ಕೊಡ್ತೀವಿ. ಕನ್ನಡ ನೆಲ, ಜಲ, ಭಾಷೆಗೆ ಆದ್ಯತೆ ಕೊಡ್ತೀವಿ ಎಂದಿದ್ದಾರೆ.

ಪ್ರತಿಮೆ ಕಳೆದ ನವೆಂಬರ್ 1 ರಂದು ಅನಾವರಣ ಆಗಬೇಕಿತ್ತು. ಪ್ರತಿಮೆ ಪೂರ್ಣ ಆಗದೇ ಇದ್ದಿದ್ದರಿಂದ ಮಾಡಲು ಆಗಿಲ್ಲ. ಡಿಸೆಂಬರ್ ನಲ್ಲಿ ಪೂರ್ಣ ಆಗಿತ್ತು. ನಾನು ಜನವರಿಯಲ್ಲಿ ಮಾಡೋಣ ಎಂದು ಹೇಳಿದ್ದೆ. ಇವತ್ತು ಅನಾವರಣ ಆಗಿದೆ. ಶ್ರೀಧರ್ ಅವರು ಸುಂದರವಾಗಿ ಪ್ರತಿಮೆ ಮಾಡಿದ್ದಾರೆ. ಅವರಿಗೆ ಸರ್ಕಾರ, ಜನರ ಪರವಾಗಿ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಆಡಳಿತ ಕನ್ನಡ ಭಾಷೆಯಲ್ಲಿ ಇರಬೇಕು. ಆಡಳಿತ ಭಾಷೆ ಇಂಗ್ಲಿಷ್ ಇರಬಾರದು. ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡವನ್ನು ಕಲಿಯಲೇ ಬೇಕು. ಕನ್ನಡಿಗರು ನೀವು ಬೇರೆಯವರ ಜೊತೆ ಕನ್ನಡದಲ್ಲಿ ಮಾತಾಡಿ. ನಮ್ಮ ಭಾಷೆ ಅವರಿಗೆ ಕಲಿಸಿ. ಕರ್ನಾಟಕದಲ್ಲಿ ಬೇರೆ ಭಾಷೆಯವರು ಕನ್ನಡ ಕಲಿಯದೇ ಜೀವನ ಮಾಡುತ್ತಿದ್ದಾರೆ. ಆದರೆ ಆಂಧ್ರ, ತಮಿಳುನಾಡು, ಕೇರಳ ಸೇರಿ ಬೇರೆ ರಾಜ್ಯದಲ್ಲಿ ಇಲ್ಲ. ಭಾಷೆ ವಿಚಾರದಲ್ಲಿ ಉದಾರವಾದಿಗಳಾಗಿ ಕನ್ನಡಕ್ಕೆ ಕುತ್ತು ಬರೋ ಕೆಲಸ ಆಗಬಾರದು. ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಿ ಎಂದು ಕರೆ ಕೊಟ್ಟಿದ್ದಾರೆ.

Share This Article