ಬಂದ್ರೆ ಬರ್ತಾರೆ, ಕಮ್ ಆ್ಯಂಡ್ ಜಾಯ್ನ್: ಡಿಕೆಶಿಗೆ ಕಾಯದೇ ಗರಂ ಆದ ಸಿಎಂ ಸಿದ್ದರಾಮಯ್ಯ

By
1 Min Read

ಬೆಂಗಳೂರು: ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಗರಂ ಆದ ಘಟನೆ ನಡೆಯಿತು.

ಭಯೋತ್ಪಾದನಾ ವಿರೋಧಿ ದಿನ ಹಿನ್ನೆಲೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮ ಇತ್ತು.‌ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಿಗದಿ ಆಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಆಹ್ವಾನ ಇತ್ತು. ಆದರೆ ಸಿಎಂ ಸಿದ್ದರಾಮಯ್ಯ ನಿಗದಿತ ಸಮಯಕ್ಕೆ ಬಂದು ಸಭಾಂಗಣದಲ್ಲಿ ಕುಳಿತರೆ, ಡಿಸಿಎಂ ಡಿಕೆಶಿ ಆಗಮಿಸಲಿರಲಿಲ್ಲ. ಇದನ್ನೂ ಓದಿ: ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

ಆಗ, ಡಿಕೆಶಿ ಬರ್ತಾರೆ ಎಂದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ವಿರುದ್ಧ ಸಿಎಂ ಮೊದಲು ಗರಂ ಆದರು. ಬರಲಿ ಬಿಡಿ, ನೀವು ಶುರು ಮಾಡಿ ಎಂದರು.‌ ಆದಾದ ಬಳಿಕ ಮತ್ತೆ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಂದಲೂ ಡಿಸಿಎಂ ಬರ್ತಿದ್ದಾರಂತೆ ಎಂದಾಗ ಸಿಎಂ ಮತ್ತೆ ಗರಂ ಆದರು. ಅಯ್ಯೋ ಕತೆ ಆಯ್ತಲ್ರೀ.. ಬಂದ್ರೆ ಬರ್ತಾರೆ, ಕಮ್ ಆ್ಯಂಡ್ ಜಾಯ್ನ್‌ ಎಂದು ಕಾರ್ಯಕ್ರಮ ಶುರು ಮಾಡಿಸಿದರು.

ಬಳಿಕ ವಿಧಾನಸೌಧದ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗಕ್ಕೆ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಬೋಧಿಸಿದ ಸಿಎಂ ಸಿದ್ದರಾಮಯ್ಯ, ಮಂಗಳೂರು ಪ್ರವಾಸಕ್ಕೆ ಹೋಗಬೇಕು ಅಂತಾ ತರಾತುರಿಯಲ್ಲಿ ವಿಧಾನಸೌಧದಿಂದ ಹೆಚ್‌ಎಎಲ್‌ಗೆ ತೆರಳಿದರು. ಇದನ್ನೂ ಓದಿ: ಕೆರಗೋಡು ವಿವಾದಿತ ಅರ್ಜುನ ಸ್ತಂಭದಲ್ಲಿ ನೂತನ ಧ್ವಜಾರೋಹಣ

Share This Article