ಸಾಲಮನ್ನಾಕ್ಕಾಗಿ ಅನುದಾನ ಕಡಿತ ಪ್ಲಾನ್ – ಸಿದ್ದರಾಮಯ್ಯ ಭಾಗ್ಯಗಳಿಗೆ ಬೀಳುತ್ತಾ ಕತ್ತರಿ?

Public TV
2 Min Read

– ಶೇ.20ರಷ್ಟು ಕಡಿತಕ್ಕೆ ಸಿಎಂ ಆಲೋಚನೆ

ಬೆಂಗಳೂರು: ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಚುನಾವಣೆ ವೇಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದ ಭರವಸೆ ಈಗ ಆರ್ಥಿಕ ಚಕ್ರವ್ಯೂಹದಲ್ಲಿ ಸಿಲುಕುವಂತೆ ಮಾಡಿದೆ.

ಮುಖ್ಯಮಂತ್ರಿಗಳು ಈ ಚಕ್ರವ್ಯೂಹದಿಂದ ಹೊರಬರಲು ಕಸರತ್ತು ನಡೆಸುತ್ತಿದ್ದು, ಅನುದಾನ ಕಡಿತ ಸೂತ್ರ ಹೆಣೆದಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ್ದ ಶೇಕಡ 20ರಷ್ಟು ಅನುದಾನವನ್ನು ಕಡಿತ ಮಾಡಲು ಮುಂದಾಗಿದ್ದಾರೆ ಅಂತ ಹೇಳಲಾಗಿದೆ.

ಈ ಹಿಂದಿನ ಬಜೆಟ್ ಗಾತ್ರ ಮೀರದಂತೆ ಎಚ್ಚರ ವಹಿಸಿದ್ದು, ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ್ದ ಹಣದಲ್ಲಿ ಶೇಕಡ 20% ಹಣವನ್ನು ಕಡಿತ ಮಾಡಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಪ್ರತಿ ಇಲಾಖೆಯ ಸಚಿವರು ಹಾಗೂ ಮುಖ್ಯಸ್ಥರಿಗೂ ಮುಖ್ಯಮಂತ್ರಿಗಳು ಖಡಕ್ ಸೂಚನೆ ರವಾನಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟಿದ್ದ ಅನುದಾನದಲ್ಲಿ 20% ಇಲಾಖೆ ಕಡಿತ ಮಾಡಿ ಉಳಿದ ಅನುದಾನ ಮಿತಿಯೊಳಗೆ ಯೋಜನೆಗಳು ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಬಜೆಟ್ ಬಳಿಕ ಸಿದ್ದರಾಮಯ್ಯ ವರ್ಸಸ್ ಮೈತ್ರಿ ಸರ್ಕಾರದ ನಡುವೆ ಫೈಟ್ ಶುರುವಾಗುತ್ತಾ…? ಭಾಗ್ಯಗಳ ಸರದಾರ ಸಿದ್ದರಾಮಯ್ಯರಿಗೆ ಹೆಚ್‍ಡಿಕೆ ಕೊಡ್ತಾರಾ ಒಳ ಏಟು..? ಅನ್ನೋದನ್ನ ಕಾದುನೋಡಬೇಕಿದೆ. ಈ ಮಧ್ಯೆ, ಇಂದಿನ ಬಜೆಟ್ ಸಿದ್ಧತೆ ಆರಂಭಿಸಿರೋ ಸಿಎಂ, ಮೊದಲ ದಿನ ಸಚಿವರು ಮತ್ತು ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು.

20% ಪರ್ಸೆಂಟ್ ಸಾಲಮನ್ನಾ ಸೂತ್ರ ಹೇಗೆ…?
* ಕಳೆದ ಬಜೆಟ್ ಗಾತ್ರ 2 ಲಕ್ಷ 9 ಸಾವಿರ ಕೋಟಿ ಇತ್ತು.
* ಇದರಲ್ಲಿ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಹೆಚ್ಚು ಅನುದಾನ ಕೊಟ್ಟಿದ್ರು.
* ಹಿಂದಿನ ಬಜೆಟ್ ಗಾತ್ರಕ್ಕಿಂತ ಈ ಬಜೆಟ್ ಗಾತ್ರ ಹೆಚ್ಚಾಗಬಾರದೆಂದು ಅಧಿಕಾರಿಗಳಿಗೆ ಸಲಹೆ.
* ಹಿಂದಿನ ಬಜೆಟ್‍ನಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ ಅನುದಾನದಲ್ಲಿ ಕಡಿತ.
* ಪ್ರತಿ ಇಲಾಖೆಗಳ ಅನುದಾನದಲ್ಲಿ ಶೇಕಡಾ 20% ರಷ್ಟು ಅನುದಾನ ಕಡಿತ.
* ಕಡಿತವಾದ ಶೇಕಡಾ 20%ರಷ್ಟು ಅನುದಾನ ಹಣವನ್ನ ಸಾಲಮನ್ನಾಗೆ ಬಳಕೆಗೆ ಪ್ಲಾನ್.
* ಸಾಲಮನ್ನಾಗೆ ಸ್ವಲ್ಪಮಟ್ಟಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಅನುಕೂಲ.
* ಹಿಂದಿನ ಸರ್ಕಾರದ ಭಾಗ್ಯ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲ್ಲ.

ಅನುದಾನ ಕಡಿತದಿಂದ ಏನಾಗಲಿದೆ?
* ಹಿಂದಿನ ಸರ್ಕಾರದ ಭಾಗ್ಯ ಯೋಜನೆಗಳು ಸಂಪೂರ್ಣವಾಗಿ ನಿಲ್ಲದಿದ್ದರೂ ಹೊಡೆತ ಬೀಳಲಿದೆ.
* ಅನುದಾನ ಕಡಿತದಿಂದ ಇಲಾಖೆಗಳ ಯೋಜನೆಗಳೂ ಕುಂಠಿತವಾಗಬಹುದು.
* ಅಭಿವೃದ್ಧಿ ಯೋಜನೆಗಳ ಮೇಲೂ ಪರಿಣಾಮ ಬೀರಬಹುದು.
* ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದಿರಬಹುದು.
* ಇದು ಸಹಜವಾಗಿಯೇ ಸಿದ್ದರಾಮಯ್ಯ ವರ್ಸಸ್ ಹೆಚ್‍ಡಿಕೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ.

Share This Article
Leave a Comment

Leave a Reply

Your email address will not be published. Required fields are marked *