ಪ್ರಧಾನಿ ಮೋದಿ ಸವಾಲಿಗೆ ಟಾಂಗ್ ನೀಡಿ ಉತ್ತರ ಕೊಟ್ಟ ಎಚ್‍ಡಿಕೆ

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್‍ಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.

ಮೋದಿ ಅವರ ಚಾಲೆಂಜ್‍ಗೆ ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ “ನರೇಂದ್ರ ಮೋದಿ ಅವರೇ, ನನಗೆ ಗೌರವವಿದೆ ಹಾಗೂ ನನ್ನ ಆರೋಗ್ಯದ ಬಗ್ಗೆ ನೀವು ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು. ನಾನು ಒಪ್ಪುತ್ತೇನೆ ದೈಹಿಕ ವ್ಯಾಯಾಮದಲ್ಲಿ ಆರೋಗ್ಯಕ್ಕೆ ತುಂಬಾ ಅವಶ್ಯಕತೆ ಇದೆ ಹಾಗೂ ನಮಗೆ ಅದು ಒಳ್ಳೆಯ ರೀತಿಯಲ್ಲಿ ಸಹಾಯವಾಗುತ್ತದೆ. ನನ್ನ ದಿನನಿತ್ಯದ ಜೀವನದಲ್ಲಿ ನಾನು ಯೋಗ ಹಾಗೂ ಟ್ರೇಡ್‍ಮಿಲ್ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಇದರ ಜೊತೆಗೆ ನಾನು ರಾಜ್ಯದ ಫಿಟ್ನೆಸ್ ಗೆ ಹೆಚ್ಚು ಗಮನ ನೀಡುತ್ತೇನೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ನಾನು ನಿಮ್ಮಿಂದ ಸಹಾಯ ನಿರೀಕ್ಷಿಸುತ್ತೇನೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

ತಮ್ಮ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದರು.

ಮುಖ್ಯಮಂತ್ರಿಗಳ ಸಚಿವಾಲಯದಿಂದ ನಿರ್ವಹಣೆಯಾಗುವ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ತನ್ನ ವೈಯಕ್ತಿಕ ಆರೋಗ್ಯಕ್ಕಿಂತಲೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುವ ಕುಮಾರಸ್ವಾಮಿ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಖಾತೆಯಿಂದ ಕುಮಾರಸ್ವಾಮಿಯವರ ವೈಯಕ್ತಿಕ ಖಾತೆಗೆ ಟ್ವೀಟ್ ಮಾಡಿದ್ದಾರೆ ಹೊರತು ಮುಖ್ಯಮಂತ್ರಿಗಳ ಖಾತೆಗೆ ಅಲ್ಲ. ಕುಮಾರಸ್ವಾಮಿಯವರ ಖಾತೆಯನ್ನು ನಿರ್ವಹಣೆ ಮಾಡುವವರು ಈ ವಿಚಾರವನ್ನು ಗಮನಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಎಚ್‍ಡಿಕೆಗೆ ಸವಾಲ್- ವಿಡಿಯೋ ನೋಡಿ

https://twitter.com/shetty_shailesh/status/1006767339306614784

Share This Article
Leave a Comment

Leave a Reply

Your email address will not be published. Required fields are marked *