‘ಬಿಜೆಪಿ ವ್ಯಕ್ತಿಯೊಬ್ಬ ನಮ್ಮ ನಾಯಕರ ಹೆಸರನ್ನು ಅಮಿತ್ ಶಾಗೆ ಕಳುಹಿಸಿ ದಾಳಿ ಮಾಡಲಾಗಿದೆ’

Public TV
2 Min Read

– ಮೈಸೂರಿನಲ್ಲಿ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ
– ಲೂಟಿ ಮಾಡುವವರು ನಾವಲ್ಲ
– ಬಾಲಕೃಷ್ಣ ಬಿಜೆಪಿ ಏಜೆಂಟ್

ಮೈಸೂರು: ರಾಜ್ಯದ ಓರ್ವ ಬಿಜೆಪಿ ವ್ಯಕ್ತಿ ಕೆಲವು ಜೆಡಿಎಸ್ ನಾಯಕರ ಹೆಸರುಗಳ್ನು ಪಟ್ಟಿ ಮಾಡಿ, ಭಾಜಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಗೆ ಕಳುಹಿಸುತ್ತಾರೆ. ಈ ಪಟ್ಟಿಯನ್ನು ಅಮಿತ್ ಶಾ ನೇರವಾಗಿ ಬಾಲಕೃಷ್ಣ ಅವರಿಗೆ ಕಳುಹಿಸಿ ದಾಳಿ ಮಾಡಿ ಎಂದು ಸಂದೇಶ ಕಳುಹಿಸುತ್ತಾರೆ. ಬಿಜೆಪಿ ಏಜೆಂಟ್ ಆಗಿರುವ ಬಾಲಕೃಷ್ಣ ದಾಳಿ ನಡೆಸುತ್ತಾರೆ. ಈ ಐಟಿ ದಾಳಿ ಕೇವಲ ಮಂಡ್ಯ, ರಾಮನಗರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಸೀಮಿತ ಯಾಕೆ ಎಂಬುದನ್ನು ಬಿಜೆಪಿ ಉತ್ತರ ನೀಡಬೇಕೆಂದು ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿಯೂ ದೇವೇಗೌಡರ ಸಂಬಂಧಿಯ ಮನೆ ದಾಳಿ ನಡೆದಿದೆ ಹೊರತು ಬಿಜೆಪಿ ನಾಯಕ ಮನೆ, ಕಚೇರಿಗಳ ಮೇಲಲ್ಲ. ಶಿವಮೊಗ್ಗದಲ್ಲಿ ಸಿಕ್ಕ 2 ಕೋಟಿ ರೂಪಾಯಿ ಯಾರದು ಎಂಬುದರ ಬಗ್ಗೆ ಮೊದಲು ಗೊತ್ತಾಗಬೇಕಿದೆ. ಶಿವಮೊಗ್ಗದಲ್ಲಿ ಸಿಕ್ಕ 2 ಕೋಟಿ ಹಣದ ಪ್ರಕರಣ ಏನಾಯ್ತು? ಈ ಬಗ್ಗೆ ಎಲ್ಲಿಯೂ ಐಟಿ ಮುಖ್ಯಸ್ಥ ಬಾಲಕೃಷ್ಣ ಮಾತನಾಡಲ್ಲ. ಯಡಿಯೂರಪ್ಪನವರು ಕೇವಲ ಕೈ ಮುಗಿದು ಮತ ಕೇಳುತ್ತಾರೆ ಎಂದರೆ ಯಾರು ನಂಬಲ್ಲ ಎಂದು ಕಿಡಿಕಾರಿದರು.

ಬಿಎಸ್ ಯಡಿಯೂರಪ್ಪ ಡೈರಿಯ ಪುಟಗಳು ಸಿಕ್ಕಾಗ ಐಟಿ ಮುಖ್ಯಸ್ಥ ಬಾಲಕೃಷ್ಣ ಪ್ರತಿಕ್ರಿಯೆ ನೀಡುತ್ತಾರೆ. ಈ ಮೊದಲು ಯಾವ ವಿಷಯಗಳಿಗೆ ಈ ರೀತಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಚಿಂತನೆ ಮಾಡಬೇಕು. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸಂಸ್ಥೆಗಳನ್ನು ಬಿಜೆಪಿ ದುರಪಯೋಗ ಮಾಡಿಕೊಳ್ಳುತ್ತಿದೆ. ನ್ಯಾಯಾಲಯದ ಆದೇಶ ಪಡೆಯದೇ ಸಿಎಂ ನಿವಾಸದ ಮೇಲೆ ದಾಳಿ ನಡೆಸುವ ಹಾಗಿಲ್ಲ. ಹಾಗಾಗಿ ಬಾಲಕೃಷ್ಣ ಎಂಬ ವ್ಯಕ್ತಿ ನನ್ನ ಬಗ್ಗೆ ಎಷ್ಟು ಸಂಶೋಧನೆ ನಡೆಸಿ ಮಾಹಿತಿ ಕೆಲಹಾಕಿ ವಿಫಲರಾಗಿದ್ದಾರೆ ಎಂಬುವುದು ನನಗೆ ಗೊತ್ತಿದೆ. ಬಿಜೆಪಿ ಆಡಳಿತದ ಯಾವ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲವೇ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷದ ನಾಯಕರ ಮೇಲೆ ದಾಳಿ ನಡೆಸಿ ಚುನಾವಣೆ ಗೆಲ್ಲಬೇಕು ಎಂಬುವುದು ಬಿಜೆಪಿಯ ತಂತ್ರವಾಗಿದೆ. ಬೆಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಲಿದ್ದೇನೆ. ನಮ್ಮ ಪ್ರತಿಭಟನೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ. ಬಿಜೆಪಿಯ ಈ ಕೆಲಸವನ್ನು ಇಡೀ ದೇಶ ನೋಡಬೇಕಿದೆ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *