ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೇ ಮರೆತ ಸಿಎಂ ಬಗ್ಗೆ ನಾನೇನು ಮಾತಾಡ್ಲಿ: ಸುಮಲತಾ

Public TV
1 Min Read

ಮಂಡ್ಯ: ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ ಅವರ ಬಗ್ಗೆ ನಾನೇನು ಮಾತನಾಡಲಿ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಕೆಆರ್ ನಗರದ ಬಾಚನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಸಾವಿನ ಕುರಿತ ಸಿ.ಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನೂರಕ್ಕೆ ನೂರರಷ್ಟು ಸುಳ್ಳು ಹೇಳಿದರೆ, ನಾನು ಏನು ಮಾಡಲಿ. ಕುಮಾರಸ್ವಾಮಿ ಅವರು ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ. ಬಹುಶಃ ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಕುಟುಂಬ ಸದಸ್ಯರನ್ನ ಕಳೆದುಕೊಂಡ ನೋವು ಅವರಿಗೆ ಗೊತ್ತಿಲ್ಲ. ಅವರಿಗೆ ಬರುವುದು ಬೇಡ. ಮಗನ ರಾಜಕೀಯಕ್ಕಾಗಿ ಅವರು ಮಾನವೀಯತೆ ಇಲ್ಲದೆ ಮಾತಾಡ್ತಿದ್ದಾರೆ. ಅವರು ಕುಟುಂಬ ರಾಜಕಾರಣ ಮಾಡ್ತಿರೋದ್ರಿಂದ ಅವರ ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಕ್ಕೆ ಸಿ.ಎಂ ಹಾಗೆ ಮಾತಾಡುತ್ತಿದ್ದಾರೆ. ಅವರು ಅಳುವುದೇ ಚುನಾವಣೆ ಸಮಯದಲ್ಲಿ ಎಂದು ವ್ಯಂಗ್ಯ ಮಾಡಿದರು.

ಸಿಎಂ ಮಗನ ಪರ ಪ್ರಚಾರ ಮಾಡಲಿ. ನನ್ನಲ್ಲಿ ಲೋಪವಿದ್ದರೆ ಜನ ಹೇಳುತ್ತಾರೆ. ಕ್ಷೇತ್ರದಲ್ಲಿ ಅವರ ಅಭ್ಯರ್ಥಿ ಕಾಣಿಸುತ್ತಿಲ್ಲ. ನಾನು ಸ್ಪರ್ಧೆ ಮಾಡ್ತಿರೋದು ನಿಖಿಲ್ ವಿರುದ್ಧವೋ ಅಥವಾ ಕುಮಾರಸ್ವಾಮಿ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದರು. ನಟ ದರ್ಶನ್ ತೋಟದ ಮನೆ ಮೇಲೆ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಬಹುಶಃ ಇವರೇ ಕಳುಹಿಸಿದ್ದಾರೊ ಏನೋ. ಈ ರೀತಿಯ ಹೇಳಿಕೆಗಳಿಂದ ನನ್ನ ಮೇಲೆ ಎಷ್ಟೇ ಬಾಣ ಬಿಟ್ಟರೂ ಜನರಿಗೆ ಇವರ ನಿಜ ಸ್ವರೂಪ ಗೊತ್ತಾಗಲಿದೆ. ಅಂಬಿ ಮೃತ ದೇಹ ಮಂಡ್ಯಗೆ ತಂದ ಉದ್ದೇಶ ಏನು? ಅವರೇನು ಅನಾಥರಲ್ಲ, ಇವರು ಸಿ.ಎಂ ಆಗಿ ಸರ್ಕಾರ ನೀಡೊ ಸೌಲಭ್ಯ ಬಳಸಿಕೊಂಡು ಕೇಂದ್ರ ನೀಡಿದ ಕಾಪ್ಟರ್ ಬಳಸಿಕೊಂಡರು. ಕಾಪ್ಟರ್ ಸೇನೆಯವರು ಕೊಟ್ಟರು ಅಂತ ಬಿಜೆಪಿಯವರು ಏನು ತಮಟೆ ಹೊಡೆದುಕೊಂಡು ಹೇಳ್ತಿದ್ದಾರಾ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *