ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ

Public TV
2 Min Read

ರಾಮನಗರ: ಪಾಕಿಸ್ತಾನವನ್ನ (Pakistan) 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬಹುದು. ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು. ಈಗ ಒಬ್ಬ ನರಪಿಳ್ಳೆಯನ್ನೂ ಹಿಡಿದಿಲ್ಲ ಎಂದು ಕೇಂದ್ರದ ವಿರುದ್ಧ ಮಾಜಿ ಸಚಿವ ಸಿಎಂ ಇಬ್ರಾಹಿಂ (CM Ibrahim) ಕಿಡಿಕಾರಿದ್ದಾರೆ.

ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಕೈ ಶಾಸಕರ ಅನುಮಾನ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ಸಿಗರಿಗೆ ಮಾತ್ರ ಅಲ್ಲ, ದೇಶಕ್ಕೆ ಅನುಮಾನ ಇದೆ. ಪಹಲ್ಗಾಮ್‌ಗೆ ಉಗ್ರರು ಬಂದು ಅವರ ಕೆಲಸ ಮುಗಿಸಿ ಸುಸೂತ್ರವಾಗಿ ವಾಪಸ್ ಹೋಗಿದ್ದಾರೆ. ದೇಶದ ಭದ್ರತಾ ವ್ಯವಸ್ಥೆ ಏನು ಮಾಡುತ್ತಿತ್ತು? ಪುಲ್ವಾಮ ದಾಳಿ ಸೇರಿ ಸಾಕಷ್ಟು ದಾಳಿ ಆಗಿದೆ. ಅದನ್ನು ಮಾಡಿದ್ಯಾರು, ಅವರು ದೇಶದ ಒಳಗೆ ಹೇಗೆ ಬಂದರು? ಕಾಶ್ಮೀರದ ಭದ್ರತಾ ವ್ಯವಸ್ಥೆ ಕಾಶ್ಮೀರಿ ಪೊಲೀಸರ ಕೈಯಲಿಲ್ಲ, ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿದೆ. ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅವೈಜ್ಞಾನಿಕ ನೀತಿಯಿಂದ ಅಬಕಾರಿ ಆದಾಯದ ಮೂಲಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ – ಅಶೋಕ್

ದೇಶದ ಸೈನಿಕರಿಂದಲೇ ಈ ದೇಶ ಉಳಿದಿದೆ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯತೆ ಎದ್ದು ಕಾಣಿಸುತ್ತಿದೆ. ಯುದ್ಧ ಆರಂಭವಾದಾಗ ಇಡೀ ದೇಶದ ಜನ ಮೋದಿಗೆ ಸಂಪೂರ್ಣ ಬೆಂಬಲ ಕೊಟ್ಟರು. ಆದರೆ ಇದ್ದಕ್ಕಿದ್ದಂತೆ ಟ್ರಂಪ್ ಹೇಳಿದ ಎಂದು ಯುದ್ಧ ನಿಲ್ಲಿಸಿದರು. ಟ್ರಂಪ್ ಯಾರು? ನಮ್ಮ ದೊಡ್ಡಪ್ಪನಾ, ಚಿಕ್ಕಪ್ಪನಾ? ನಮ್ಮ ದೇಶದ ವಿಚಾರಕ್ಕೆ ಕೈ ಹಾಕುವ ಟ್ರಂಪ್ ಯಾರು? ಟ್ರಂಪ್ ಹೇಳಿದ ಅಂತ ನಿಲ್ಲಿಸಲು ಇವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

ಇಂದಿರಾಗಾಂಧಿ 93 ಸಾವಿರ ಬಾಂಗ್ಲಾ ಸೈನಿಕರ ಸೆರೆಹಿಡಿದಿದ್ದರು. ವಾಜಪೇಯಿ ನಮ್ಮ ದೇಶದ ವಿಚಾರಕ್ಕೆ ಮೂರನೇ ವ್ಯಕ್ತಿಗಳ ಪ್ರವೇಶ ಬೇಡ ಅಂದಿದ್ದರು. ಆದರೆ ಮೋದಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಮೊದಲು ಇತಿಹಾಸ ನೋಡಿಕೊಂಡು ಬರಲಿ. ಟ್ರಂಪ್ ಬಳಿ ಅಚ್ಚೇದಿನ ಪಡೆಯುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

ಯುದ್ಧ ನಿಲ್ಲಿಸಿದರೆ ಟೆರರಿಸ್ಟ್ ಸಿಗ್ತಾರಾ? ಉಗ್ರರನ್ನು ನಮಗೆ ಒಪ್ಪಿಸಿ ಅಂತ ಪಾಕಿಸ್ತಾನಕ್ಕೆ ಕೇಳಬೇಕಲ್ಲ. ಯಾಕೆ ಹಾಗೆ ಮಾಡಲಿಲ್ಲ, ನಮ್ಮ 25 ಮಂದಿ ಸಾವಿಗೆ ನ್ಯಾಯ ಕೊಟ್ರಾ? ಪಹಲ್ಗಾಮ್ ದಾಳಿ ಆದಮೇಲೆ ಮೋದಿ ಬಿಹಾರಕ್ಕೆ ಹೋದರು. ಮೃತಪಟ್ಟ ಪ್ರವಾಸಿಗರ ಮನೆಗೆ ಯಾಕೆ ಹೋಗಲಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ

ನವಾಜ್ ಶರೀಫ್ ಮನೆಗೆ ಹೋಗಿ ಮೋದಿ ಬಿರಿಯಾನಿ ತಿಂತಾರೆ. ಅವರನ್ನು ಯಾರು ಕರೆದಿದ್ದರು? ಕರೆಯದೆಯೂ ಹೋಗಿ ಬಂದಿದ್ದಾರೆ. ಇದನ್ನು ನೋಡಿದರೆ ಸರ್ವಜ್ಞ ಹೇಳಿದ್ದು ನೆನಪಾಗುತ್ತದೆ ಎಂದು ಗುಡುಗಿದರು. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

Share This Article