ಹುಡ್ಗನ ನೋಡ್ದೇ ಅವರಪ್ಪನ ನೋಡಿ ಹೆಣ್ಣು ಕೊಡ್ತಾರಾ? ಸಿಎಂ ಇಬ್ರಾಹಿಂ ವ್ಯಂಗ್ಯ

Public TV
2 Min Read

-ಬಿಜೆಪಿ ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತೆ

ಬಾಗಲಕೋಟೆ: ಭಾಷಣದ ಭರದಲ್ಲಿ ಅವಾಚ್ಯ ಪದ ಬಳಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಸವಿರುದ್ಧ ಮಾಜಿ ಸಚಿವ ಸಿಎಂ ಇಬ್ರಾಹಿಂ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಬಾದಾಮಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಹಿರಂಗ ಭಾಷಣ ಮಾಡಿದ ಅವರು, ಬಿಜೆಪಿಯವರು ಹೇಳ್ತಾರೆ ಗದ್ದಿಗೌಡರನ್ನ ನೋಡಬೇಡಿ, ಮೋದಿ ನೋಡಿ ವೋಟ್ ಹಾಕಿ ಅಂತಾ. ಹೆಣ್ಣು ಕೊಡಬೇಕಾದರೇ ಹುಡುಗನ್ನ ನೋಡ್ತಾರ, ಇಲ್ಲ ಅವರ ಅಪ್ಪನ ನೋಡ್ತಾರ? ಮದುವೆ ಹುಡುಗಿಯ ಅಮ್ಮನನ್ನು ನೋಡಿದರೆ ಸಾಕು ಮದುವೆ ಆಗ್ಬಿಡುತ್ತೆ ಅಂತ ಹೇಳಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ಈಗ ಶಾಸಕ ಶ್ರೀರಾಮುಲು ಹಾಗೂ ಸಿದ್ದರಾಮಯ್ಯರಿಗೆ ಮಧ್ಯೆ ಜನಳ ಮಾಡಿಸಿದ್ದಾರೆ. ಗಂಡಸ್ತನ ಇದ್ದರೇ ಮಾಜಿ ಸಿಎಂ ಯಡಿಯೂರಪ್ಪ ಅವರೇ ನಿಲ್ಲಬೇಕಿತ್ತು. ಬಿಜೆಪಿ ಅವರು ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡ್ತಾರೆ. ಬಳಿಕ ಈಶ್ವರಪ್ಪ ಹುಚ್ಚ, ಗಿಡ್ಡ ಅವನಿಗೆ ಒಂದು ಸೀಟು ಹಿಂದುಳಿದ ವರ್ಗಕ್ಕೆ ತೆಗೆದುಕೊಳ್ಳಲು ಆಗಿಲ್ಲ. ಮುಸ್ಲಿಂರನ್ನ ಅವನು ಮರೆತ್ತಿದ್ದಾನೆ ಎಂದು ಬಿಎಸ್‍ವೈ ಹಾಗೂ ಈಶ್ವರಪ್ಪ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತ ವಚನವೊಂದನ್ನು ಉಲ್ಳೇಖಿಸಿದರು. ನಂತರ ಮೋದಿ ಅವರು ವಾರ್ಷಿಕ 6 ಸಾವಿರ ರೂ. ನೀಡುತ್ತೆನೆ ಅಂದ್ರು. ನಮ್ಮನೇನು ಅವರು ಬಿಕಾರಿ ಎಂದುಕೊಂಡಿದ್ದೀರ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಈ ಹಣವನ್ನು ಲೆಕ್ಕ ಹಾಕಿದರೆ ಒಬ್ಬರಿಗೆ ದಿನಕ್ಕೆ 17ರೂ. ಬರುತ್ತೆ. ಅದರಲ್ಲಿ ಜಿಎಸ್‍ಟಿ ಕೂಡ ಇರತ್ತೆ. ಈಗಿನ ಕಾಲದಲ್ಲಿ ಅಷ್ಟು ಹಣದಲ್ಲಿ ಏನು ಸಿಗತ್ತೆ? ಹೋಟೆಲ್ ಹೋಗಿ 17ರೂ. ತಿಂಡಿ ತಿಂದರೆ 18ರೂ. ಈ ಗಬ್ಬರ್‍ಸಿಂಗ್ ಟ್ಯಾಕ್ಸ್ ಕಟ್ಟಬೇಕು. ಜನರನ್ನೇ ಕೇಳಿ ಸಿದ್ದರಾಮಯ್ಯ ಅವಧಿಯಲ್ಲಿ ತೆರಿಗೆ ಹೇಗಿತ್ತು? ಮೋದಿ ಕಾಲದಲ್ಲಿ ಹೇಗಿದೆ ಅಂತ. ಈ ತೆರಿಗೆ ನೀತಿಯಿಂದ ಜನರು ಬೇಸತ್ತಿದ್ದಾರೆ ಎಂದು ಹರಿಹಾಯ್ದರು.

ಮೋದಿ ಅವರ ಅವಧಿಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ವಿದೇಶ ಪ್ರವಾಸ ಹೋದರು. ಇಂತಹ ಪಿಎಂ ಕಳೆದ 70 ವರ್ಷದಲ್ಲಿ ನೋಡಿರಲಿಲ್ಲ. ಮೂರು ತಿಂಗಳೂ ಭಾರತದಲ್ಲಿದ್ದರೇ, 9 ತಿಂಗಳು ಅಮೆರಿಕಾದಲ್ಲಿರುತ್ತಾರೆ. ಅಲ್ಲಿ ಹೋಗಿ ಬಾಯಿ ಬೆಹನೋ ಅಂದರೆ ಏನು ಪ್ರಯೋಜನ. 10 ಲಕ್ಷದ ವಸ್ತ್ರ ಹಾಕುವ ಮೋದಿಗೆ ಬೇರೆ ಯೋಚನೆ ಮಾಡ್ತಾರಾ ಅಂತ ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *