ಇಡೀ ದೇಶದಲ್ಲೇ ಬೊಮ್ಮಾಯಿ ಅಧಿಕಾರವಿಲ್ಲದ ಮುಖ್ಯಮಂತ್ರಿ: ಸಿಎಂ ಇಬ್ರಾಹಿಂ

Public TV
2 Min Read

ರಾಯಚೂರು: ಇಡೀ ದೇಶದಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅಧಿಕಾರವಿಲ್ಲದ ಮುಖ್ಯಮಂತ್ರಿ, ಕೇಶವಕೃಪದ ಅಣತೆಯಂತೆ ಅಧಿಕಾರ ಚಲಾವಣೆ ನಡೆಯುತ್ತಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS) ಗೆ ಯಾರೂ ಹೈಕಮಾಂಡ್ ಇಲ್ಲ, ಜನರೇ ನಮಗೆ ಹೈಕಮಾಂಡ್ ಎಂದರು. ತೆಲಂಗಾಣದಲ್ಲಿ ಚಂದ್ರಶೇಖರ್ (Chandrashekhar) ನಾಲ್ಕು ವರ್ಷದಲ್ಲಿ ನೀರಾವರಿ ಮುಗಿಸಿದ್ರು. 26 ಜನ ಎಂಪಿಗಳು ಕೂಳಿಗೆ ಭಾರವಾಗಿದ್ದಾರೆ. ಮೋದಿ ಮತ್ತು ಅಮಿತ್ ಶಾ (AmitShah) ವಿರುದ್ಧ ಮಾತನಾಡುವ ನೈತಿಕತೆ ನಮ್ಮ ಎಂಪಿಗಳಿಗೆ ಇಲ್ಲ ಅಂತ ಲೇವಡಿ ಮಾಡಿದರು ಎಂದು ಹೇಳಿದರು.

ನಾವು 2023ರ ಚುನಾವಣೆಗಾಗಿ ಜನರ ಮುಂದೆ ಹೋಗುತ್ತಿದ್ದೇವೆ. ರಾಜ್ಯದ ಹಲವು ಕಡೆ ನಾವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಜನವರಿ ತಿಂಗಳಲ್ಲಿ ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ. ನಿರ್ದಿಷ್ಟ ಕಾರ್ಯಕ್ರಮದ ಮುಖಾಂತರ ಜನರ ಮುಂದೆ ಹೋಗುತ್ತಿದ್ದೇವೆ. ಎಚ್ ಡಿಕೆ (HD Kumaraswamy) ಸಿಎಂ ಆಗಲಿಲ್ಲ ಅಂದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ ಶಪಥ ಮಾಡಿದರು ಎಂದರು.

ರಾಜ್ಯದಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಮೇನಲ್ಲಿ ಚುನಾವಣೆ ಮುಗಿಯುತ್ತೆ, ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತೆ ಎಂದರು. ಕೋವಿಡ್ ನೆಪ ಹೇಳಿ ಸರ್ಕಾರ ಪಂಚರತ್ನ ಯಾತ್ರೆ (Pancharatna Yatre) ಯನ್ನು ನಿಲ್ಲಿಸಲು ಪ್ರಯತ್ನಿಸ್ತಿದೆ. ಜನ ತಾವಾಗೇ ಯಾತ್ರೆಯಲ್ಲಿ ಭಾಗಿಯಾಗ್ತಿದ್ದಾರೆ. ತಂದ ಜನಕ್ಕೆ ಅಲ್ಲ, ಬಂದ ಜನಕ್ಕೆ ನಾವು ಭಾಷಣ ಮಾಡುತ್ತಿದ್ದೇವೆ. ರಾತ್ರಿ 1 ಗಂಟೆಯವರೆಗೂ ಜನ ಹಳ್ಳಿ ಹಳ್ಳಿಗಳಲ್ಲಿ ಪಂಚರತ್ನಯಾತ್ರೆಯನ್ನ ಆಹ್ವಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

ಹೊಸ ವರ್ಷಾಚರಣೆ ವೇಳೆ ಮದ್ಯಪ್ರಿಯರನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವಿಚಾರವಾಗಿ ಮಾತನಾಡಿದ ಸಿಎಂ ಇಬ್ರಾಹಿಂ ವಿಧಾನಸಭೆಯಲ್ಲಿ ಹಲವರು ಅಂತವರಿದ್ದಾರೆ. ಅವರಿಗಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಿರಬಹುದು ಎಂದು ಲೇವಡಿ ಮಾಡಿದರು. ಸತ್ತವರ ಹೆಸರಿನಲ್ಲಿ ದುಡ್ಡು ತಿಂದ ಸರ್ಕಾರ ಇದು ಅಂಬುಲೆನ್ಸ್ ನೀಡುವಲ್ಲಿ ಆರೋಗ್ಯ ಇಲಾಖೆ ವೈಫಲ್ಯವಾಗಿದೆ. ಕೋವಿಡ್ (COVID19) ಹೆಸರಿನಲ್ಲಿ ಮತ್ತೆ ಲೂಟಿ ನಡೆಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ತೆಲಂಗಾಣ (Telangana) ದ ಸಿಎಂ ಜೊತೆ ವಿಧಾನಸಭೆಯ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ, ಲೋಕಸಭೆಯಲ್ಲಿ ಮೈತ್ರಿ ಆಗಲಿದೆ. ಪ್ರಾದೇಶಿಕ ಪಕ್ಷಗಳು ಒಂದಾಗಿ ಒಂದು ರಾಷ್ಟ್ರೀಯ ಶಕ್ತಿ ಮಾಡುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರಾಯಚೂರಿಗೆ ಏಮ್ಸ್ ಕೊಡುತ್ತೇವೆ ಎಂದರು. ಇದನ್ನೂ ಓದಿ: ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

ಕರ್ನಾಟಕದ ಕೆಲವು ಊರುಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಧಾರ ಬಿಜೆಪಿಯವರು ಮಾಡಿಸುತ್ತಿದ್ದಾರೆ. ಬಿಜೆಪಿಯವರಿಗೆ ವಿಷಯಗಳಿಲ್ಲ. ಹಾಗಾಗಿ ಇವರೇ ಹೇಳಿ ಮಾಡಿಸುತ್ತಿದ್ದಾರೆ. ಇನ್ನೂ ಮಾಜಿ ಸಚಿವ ಜರ್ನಾರ್ದನ ರೆಡ್ಡಿ (Janardhan Reddy) ಹೊಸ ಪಕ್ಷದಿಂದ ಬಿಜೆಪಿಗೆ ಡ್ಯಾಮೇಜ್ ಆಗುತ್ತೆ ಅಂತ ಸಿಎಂ ಇಬ್ರಾಹಿಂ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *